ವೀರಾಜಪೇಟೆ, ಸೆ.22: ಇಲ್ಲಿಗೆ ಸಮೀಪದ ಕೊಳತ್ತೋಡು ಬೈಗೋಡು ಗ್ರಾಮದ ನಿವಾಸಿ ಎಂ.ಪೂವಯ್ಯ (60) ಎಂಬವರು ಇಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೋದವರು ಹಿಂತಿರುಗಿ ಮನೆಗೆ ಬಂದಿಲ್ಲ ಎಂದು ಹುಡುಕಾಟ ನಡೆಸಿದಾಗ ಪಕ್ಕದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಪೂವಯ್ಯ ಅವರು ಬುದ್ಧಿಮಾಂಧ್ಯರಾಗಿದ್ದರೆಂದು ಹೇಳಲಾಗಿದ್ದು, ಗ್ರಾಮಾಂತರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿರುವದಾಗಿ ಠಾಣಾಧಿಕಾರಿ ಸುರೇಶ್ ಬೋಪಣ್ಣ ತಿಳಿಸಿದ್ದಾರೆ.