ಮಡಿಕೇರಿ, ಸೆ. 22: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2018ನೇ ಸಾಲಿನ ಕರ್ನಾಟಕ ಸಂಗೀತ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಸಾಕ್ಷಿ ಬಿ.ಜೆ. ಶೇ.85 ಅಂಕ ಗಳಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಪ್ರೇಕ್ಷಾ ಡಿ.ಎಂ. ಶೇ.82.25 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮಡಿಕೇರಿ ನಗರದ ನಿವಾಸಿ ಬಿ.ಕೆ.ಜಗದೀಶ್ ಹಾಗೂ ಬಿ.ಜೆ.ರಮ್ಯ ದಂಪತಿಗಳ ಪುತ್ರಿ ಸಾಕ್ಷಿ ಬಿ.ಜೆ. ಮತ್ತು ವೀರಾಜಪೇಟೆ ನಿವಾಸಿ ದೇವಾಂಜನ ಮಂಜುನಾಥ್ ಹಾಗೂ ಭಾರತಿ ದಂಪತಿಗಳ ಪುತ್ರಿ ಪ್ರೇಕ್ಷಾ ಡಿ.ಎಂ. ನಗರದ ಕಲಾನಿಕೇತನ ಸಂಗೀತ ಶಾಲೆಯ ಗುರುಗಳಾದ ಪ್ರಭಾಭಟ್ ಕೆ.ಜಿ. ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.