ಮಡಿಕೇರಿ, ಸೆ. 22: ಮಡಿಕೇರಿ ಕೊಡವ ಸಮಾಜದ ಕಲ್ಚರಲ್ ಅಂಡ್ ಸೋಷಿಯಲ್ ವೆಲ್‍ಫೇರ್ ಸೆಂಟರ್‍ನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಕೀಲ ಮೂವೇರ ಶಂಭು ಸುಬ್ಬಯ್ಯ ಅವರು ಆಯ್ಕೆಯಾಗಿದ್ದಾರೆ. ಮೊನ್ನೆ ನಡೆದ ಸಭೆಯಲ್ಲಿ ಅವರು ಹಾಲಿ ಅಧ್ಯಕ್ಷರಾಗಿದ್ದ ಮುಂಡಂಡ ಸೋಮಣ್ಣ ಅವರಿಂದ ಅಧಿಕಾರ ಸ್ವೀಕರಿಸಿದರು.

ಶಂಭು ಸುಬ್ಬಯ್ಯ ಅವರು ಈ ಹಿಂದೆ ಎರಡು ಅವಧಿಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷರಾಗಿ, ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಡವ ಸಮಾಜದ ಅಧೀನದ ಜನರಲ್ ತಿಮ್ಮಯ್ಯ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿದ್ದು, ಇವರು ಈ ಹಿಂದೆ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಸಂದರ್ಭ ಕಲ್ಚರಲ್ ಅಂಡ್ ವೆಲ್‍ಫೇರ್ ಸೆಂಟರ್ ಪ್ರಾರಂಭಗೊಂಡಿತ್ತು. ನೂತನ ಸಾಲಿನ ಉಪಾಧ್ಯಕ್ಷರಾಗಿ ಬಲ್ಯಾಟಂಡ ಪಾರ್ಥ ಚಂಗಪ್ಪ ನೇಮಕಗೊಂಡಿದ್ದು, ಕಾರ್ಯದರ್ಶಿಯಾಗಿ ಚೆರುಮಂದಂಡ ಮಣಿ ಪೊನ್ನಪ್ಪ ಪುನರಾಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಬಿದ್ದಂಡ ಬೆನ್ ಬೆಳ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ. ಮಾಜಿ ಅಧ್ಯಕ್ಷ ಮುಂಡಂಡ ಸೋಮಣ್ಣ ಸೇರಿದಂತೆ ಇತರ ನಿರ್ದೇಶಕರುಗಳು ಸಭೆಯಲ್ಲಿ ಹಾಜರಿದ್ದರು.