ನಾಪೆÇೀಕ್ಲು, ಸೆ. 22: ಕನ್ನಡ ವಿಶ್ವ ಲಿಪಿಗಳ ರಾಣಿಯಿದ್ದಂತೆ ಇದಕ್ಕೆ ಸರಿ ಸಮನಾದ ಭಾಷೆ ಮತ್ತೊಂದಿಲ್ಲ ಎಂದು ನಾಪೆÇೀಕ್ಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪಿ.ಕೆ.ನಳಿನಿ ಅಭಿಪ್ರಾಯಪಟ್ಟರು.
ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಆಯೋಜಿಸ ಲಾಗಿದ್ದ ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿ ಉಪನ್ಯಾಸ ಮತ್ತು ವಿಶ್ವ ಮುಖಿ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಗಡಿ ಜಿಲ್ಲೆ. ಇಲ್ಲಿ ಭಾಷೆ ಹಲವಾರು. ಇಲ್ಲಿ ಕನ್ನಡಕ್ಕಿಂತ ಬೇರೆ ಭಾಷೆಗಳಿಗೆ ಆದ್ಯತೆ ಹೆಚ್ಚು. ಅದರ ನಡುವೆಯೂ ಕನ್ನಡದ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವದು ಸಮಂಜಸವಾಗಿದೆ ಎಂದರು. ಬದುಕಿಗೆ ಇತರ ಭಾಷೆ ಅನಿವಾರ್ಯವಾಗಿದೆ. ಆದರೆ ಕನ್ನಡ ನಾಡು ಮತ್ತು ನುಡಿಯನ್ನು ಎಂದಿಗೂ ಮರೆಯಬಾರದು. ಕನ್ನಡವನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಸಲಹೆ ನೀಡಿದರು. ಕನ್ನಡ ಸುಲಿದ ಬಾಳೆ ಹಣ್ಣಿದ್ದಂತೆ ಎಂಬ ಕವಿವಾಣಿಯನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ವಿಶ್ವ ಮುಖಿ ಭಾರತ ಎಂಬ ವಿಷಯದ ಬಗ್ಗೆ ಮಾತನಾಡಿ, ನಮ್ಮ ದೇಶದ ಕೀರ್ತಿಯನ್ನು 125 ವರ್ಷಗಳ ಹಿಂದೆಯೇ ವಿಶ್ವ ಮಟ್ಟದಲ್ಲಿ ಬೆಳಗಿದ ಮಹಾತ್ಮ ಸ್ವಾಮಿ ವಿವೇಕಾನಂದರು. ಸೆ. 11ರ ಆ ದಿನವನ್ನು ಭಾರತೀಯರು ಹಬ್ಬದ ದಿನವನ್ನಾಗಿ ಆಚರಿಸಬೇಕು ಆದರೆ ಮಾತ್ರ ಅವರ ಆದರ್ಶ ಗುಣ, ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ ಎಂದು ಸಲಹೆ ನೀಡಿದರು. ನಮ್ಮ ದೇಶದಲ್ಲಿ ಜ್ಞಾನಕ್ಕೆ ಕೊರತೆಯಿಲ್ಲ ಆದರೆ ಅದನ್ನು ಸದುಪಯೋಗಕ್ಕೆ ಬಳಸಿಕೊಂಡು ಕನ್ನಡ ನಾಡು, ಭಾಷೆ, ನೆಲ, ಜಲ ಉಳಿಸಲು ಪಣತೊಡಬೇಕು ಎಂದರು.
ರಮೇಶ್ ಅಳವಾರ್ ಜಾನಪದ ಸೊಗಡು ಮತ್ತು ಕೊಡಗು ಎಂಬ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಜಿಲ್ಲಾ ಮಾಜಿ ಪಂಚಾಯಿತಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ಮಾತನಾಡಿದರು.
ವೇದಿಕೆಯಲ್ಲಿ ನಾಪೆÇೀಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಸ್.ಸುರೇಶ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯೆಯರಾದ ಚೀಯಕಪೂವಂಡ ಮುತ್ತು ರಾಣಿ ಅಚ್ಚಪ್ಪ, ಪುಲ್ಲೇರ ಪದ್ಮಿನಿ ಇದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳಿಂದ ನಾಡಗೀತೆ, ಕ.ಸಾ.ಪ. ಹೋಬಳಿ ಕಾರ್ಯದರ್ಶಿ ಎನ್.ಕೆ. ಪ್ರಭು ಸ್ವಾಗತ, ಸಹ ಕಾರ್ಯದರ್ಶಿ ಉಷಾರಾಣಿ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಸುಬ್ಬಮ್ಮ ವಂದಿಸಿದರು.
ಈ ಸಂದರ್ಭದಲ್ಲಿ ಕಳೆದ ಹತ್ತನೇ ತರಗತಿ ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಷರಿಷತ್‍ನಿಂದ ಸನ್ಮಾನಿಸಲಾಯಿತು.