ಮಡಿಕೇರಿ, ಸೆ. 22: ಗ್ರೀನ್ ಸಿಟಿ ಫೋರಂ ಹಮ್ಮಿಕೊಂಡಿರುವ ಮಡಿಕೇರಿ ಕೋಟೆ ಸ್ವಚ್ಛತಾ ಅಭಿಯಾನದಡಿ 2ನೇ ದಿನವಾದ ಶನಿವಾರ ಕೋಟೆ ಆವರಣದಲ್ಲಿರುವ ಉದ್ಯಾನವನ ಸ್ವಚ್ಛಗೊಳಿಸ ಲಾಯಿತು.
ಉದ್ಯಾನದೊಳಗೆ ಬೆಳೆದಿದ್ದ ಕಾಡು ಗಿಡ, ಹುಲ್ಲುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಉದ್ಯಾನವನದ ನಿರ್ವಹಣೆ ಜವಾಬ್ದಾರಿಯನ್ನು ಗ್ರೀನ್ ಸಿಟಿ ಫೋರಂ ವಹಿಸಿಕೊಳ್ಳುವ ನಿಟ್ಟಿನಲ್ಲಿ ಸಂಬಂಧಿಸಿದರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಯಿತು.
2ನೇ ದಿನದ ಶ್ರಮದಾನದಲ್ಲಿ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಸವಿತಾ ಭಟ್, ನಿರ್ದೇಶಕರಾದ ಕುಕ್ಕೇರ ಜಯ ಚಿಣ್ಣಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಟ್ಟನ ರಾಜೇಶ್, ಮಾದೇಟಿರ ತಿಮ್ಮಯ್ಯ, ಕನ್ನಂಡ ಕವಿತಾ ಬೊಳ್ಳಪ್ಪ ಪಾಲ್ಗೊಂಡಿದ್ದರು.