ಗೋಣಿಕೊಪ್ಪ ವರದಿ, ಸೆ. 21 : ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಜನ್ಮ ದಿನೋತ್ಸವವನ್ನು ಕೊಡವ ಸಾಹಿತ್ಯ ದಿನ ಎಂದು ಆಚರಣೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪೊನ್ನಂಪೇಟೆ ಮಹಾವಿದ್ಯಾಲಯ ಹಾಗೂ ಕೊಡಗು ರಂಗಭೂಮಿ ಪ್ರತಿಷ್ಠಾನ ಸಹಯೋಗದಲ್ಲಿ ಗೋಣಿಕೊಪ್ಪ ವರದಿ, ಸೆ. 21 : ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಜನ್ಮ ದಿನೋತ್ಸವವನ್ನು ಕೊಡವ ಸಾಹಿತ್ಯ ದಿನ ಎಂದು ಆಚರಣೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪೊನ್ನಂಪೇಟೆ ಮಹಾವಿದ್ಯಾಲಯ ಹಾಗೂ ಕೊಡಗು ರಂಗಭೂಮಿ ಪ್ರತಿಷ್ಠಾನ ಸಹಯೋಗದಲ್ಲಿ ದಿನ ಎಂದು ಆಚರಿಸುವ ಘೋಷ ವಾಕ್ಯ ಘೋಷಣೆ ಬಿಡುಗಡೆ ಮಾಡಿದರು.

ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಾಮಾಜಿಕ ವಾಗಿ ಕವನ, ಕಾವ್ಯ ರಚಿಸುವ ಮೂಲಕ ಸಾರ್ವಜನಿಕರಲ್ಲಿ ಮತ್ತಷ್ಟು ಸಾಮಾಜಿಕ ಜವಬ್ದಾರಿಯನ್ನು ಹೊರಹೊಮ್ಮುವಂತೆ ಮಾಡಬೇಕಿತ್ತು ಎಂದು ಹಿರಿಯ ಪತ್ರಿಕೋಧ್ಯಮಿ ಮೈಸೂರು ಮಿತ್ರ ಸಂಪಾದಕ ಕಲ್ಯಾಟಂಡ ಬಿ. ಗಣಪತಿ ಅಭಿಪ್ರಾಯಪಟ್ಟರು.

(ಮೊದಲ ಪುಟದಿಂದ) ಅಪ್ಪಚ್ಚಕವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಆಧ್ಯಾತ್ಮಿಕ ಹಾಗೂ ಬೌಗೋಳಿಕವಾಗಿ ಸಾಕಷ್ಟು ಕವನ ರಚಿಸಿದ್ದಾರೆ. ಇದರೊಂದಿಗೆ ಒಂದಷ್ಟು ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತಹ ಬಗ್ಗೆ ಕಾವ್ಯಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತು. ಅಂತಹ ಶಕ್ತಿ ಅವರಿಗೆ ಇತ್ತು ಎಂದರು. ನಾಟಕ ಹಾಗೂ ಕವನ ಸಮಾಜ ತಿದ್ದುವ ಶಕ್ತಿಶಾಲಿ ಅಸ್ತ್ರವಾಗಿದೆ. ಕನ್ನಡ ಲಿಪಿ ಮೂಲಕ ಕೊಡವ ಭಾಷೆಗೆ ಒತ್ತು ನೀಡಿರುವದು ವಿಶೇಷ ಎಂದರು.

ಅಖಿಲ ಕೊಡವ ಸಮಾಜ ಕಾರ್ಯಾಧ್ಯಕ್ಷ ಇಟ್ಟೀರ ಕೆ. ಬಿದ್ದಪ್ಪ ಕೊಡಗಿನ ಹರದಾಸ ಅಪ್ಪಚ್ಚಕವಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕೊಡವರ ಜನಸಂಖ್ಯೆ ತೀರಾ ಕಡಿಮೆ ಇದ್ದ ಸಂದರ್ಭ ನಾಟಕ, ಕಾವ್ಯಗಳ ಮೂಲಕ ಕೊಡವ ಸಾಹಿತ್ಯಕ್ಕೆ ಒತ್ತು ನೀಡಿರುವದು ಕೊಡವ ಸಾಹಿತ್ಯಕ್ಕೆ ನಾಂದಿಯಾಯಿತು. ಸಾಮಾಜಿಕವಾಗಿ ಹೇಗೆ ಬದುಕಬೇಕು ಎಂಬವದನ್ನು ಕವನಗಳ ಮೂಲಕ ಹೇಳಿರುವದು ಅವರಲ್ಲಿನ ದೂರದೃಷ್ಠಿಯನ್ನು ತೋರಿಸುತ್ತದೆ. ನಾಟಕದ ಮೂಲಕ ಎಲ್ಲಾ ಜನಾಂಗವನ್ನು ಒಂದಾಗಿಸುವ ಅವರ ಪ್ರಯತ್ನ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡಗು ರಾಜ್ಯವಾಗಿದ್ದಾಗ ಅಂದಿನ ಮುಖ್ಯಮಂತ್ರಿ ಸಿ. ಎಂ. ಪೂಣಚ್ಚ ಅಪ್ಪಚ್ಚಕವಿಗೆ ವರಕವಿ ಎಂದು ಬಿರುದು ನೀಡಿ ಗೌರವಿಸಿದ್ದರು. ಅದರಂತೆ ಅವರು ಕೊಡಗಿನ ವರಕವಿಯಾಗಿ, ಆದಿಕವಿಯಾಗಿ, ಇಂಗ್ಲೀಷ್ ಭಾಷೆಯ ಶೇಕ್ಸ್‍ಪಿಯರ್‍ನಂತಹ ಕವಿಯಾಗಿದ್ದಾರೆ. ಲಿಪಿ ಇಲ್ಲದ ಕೊಡವ ಭಾಷೆಗೆ ಕನ್ನಡದ ಲಿಪಿ ಬಳಸಿಕೊಂಡು ಕಾವ್ಯ-ನಾಟಕ ರಚಿಸಿದ್ದಾರೆ. ಇದು ಕೊಡವ ಭಾಷೆಯ ಶ್ರೀಮಂತಿಕೆ. ಅವರು ಜನಮಾನಸದಲ್ಲಿ ಉಳಿಯುವಂತಾಗಬೇಕು. ಅವರ ಕಾವ್ಯ-ನಾಟಕ ಅಮರವಾಗಿ ಉಳಿಯಬೇಕು ಎಂದರು.

ಕೊಡಗು ರಂಗಭೂಮಿ ಪ್ರತಿಷ್ಠಾನ ಪ್ರಧಾನ ಸಂಚಾಲಕಿ ಅನಿತಾ ಕಾರ್ಯಪ್ಪ ಸ್ವಾಗತಿಸಿದರು. ಚೇಂದೀರ ನಿರ್ಮಲ ಬೋಪಣ್ಣ ಅಪ್ಪಚ್ಚಕವಿ ಗೀತೆಯ ಮೂಲಕ ಪ್ರಾರ್ಥಿಸಿದರು. ಡಾ. ಶಿವಪ್ಪ ಅಪ್ಪಚ್ಚಕವಿ ಗೀತೆಯೊಂದಿಗೆ ಅಮರಕಾವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಚೆಪ್ಪುಡೀರ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.

ಅಪ್ಪಚ್ಚಕವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಕೊಡಗಿನ ಹರದಾಸ ಅಪ್ಪಚ್ಚಕವಿ ಕೃತಿ ಬಿಡುಗಡೆ, ಜಿಲ್ಲಾ ಗ್ರಂಥಾಲಯಕ್ಕೆ ಅಪ್ಪಚ್ಚಕವಿ ಹೆಸರು ಹಾಕುವಂತೆ, ಮೈಸೂರು ಅಥವಾ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಪ್ಪಚ್ಚಕವಿ ಪೀಠ ಸ್ಥಾಪನೆ, ಅವರ ಹುಟ್ಟುಹಬ್ಬವಾಗಿರುವ ಸೆಪ್ಟೆಂಬರ್ 21 ದಿನವನ್ನು ಕೊಡವ ಸಾಹಿತ್ಯ ದಿನ ಎಂದು ಆಚರಿಸುವ ಘೋಷವಾಕ್ಯ ಘೋಷಣೆ, ಹುಟ್ಟುಹಬ್ಬವನ್ನು ಜಿಲ್ಲಾಡಳಿತದಿಂದ ಆಚರಣೆ ಮಾಡುವಂತೆ, ಅಮರಕಾವ್ಯ ಕಾರ್ಯಕ್ರಮದ ಮೂಲಕ ಕವಿಯ ಕಾವ್ಯಗಳಿಗೆ ಹಾಡಿನ ರೂಪ ನೀಡಲಾಯಿತು. ಜಿಲ್ಲಾ ಗ್ರಂಥಾಲಯಕ್ಕೆ ಅಪ್ಪಚ್ಚಕವಿ ಹೆಸರು, ಮೈಸೂರು ಅಥವಾ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಪ್ಪಚ್ಚಕವಿ ಪೀಠ ಸ್ಥಾಪನೆ, ಹುಟ್ಟುಹಬ್ಬವನ್ನು ಜಿಲ್ಲಾಡಳಿತದಿಂದ ಆಚರಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ನಿರ್ಧರಿಸಲಾಯಿತು. ಈ ಬಗ್ಗೆ ವಿಶೇಷ ನಿಯೋಗ ತೆರಳಿ ಸರ್ಕಾರಕ್ಕೆ ಮನದಟ್ಟು ಮಾಡುವಂತೆ ನಿರ್ಧರಿಸಲಾಯಿತು.

ಕಲಾವಿದರುಗಳಾದ ಅಡ್ಡಂಡ ಕಾರ್ಯಪ್ಪ, ಆಂಗೀರ ಕುಸುಮ್, ಮದ್ರೀರ ಸಂಜು, ವಿ.ಟಿ. ಶ್ರೀನಿವಾಸ್, ಚಂದ್ರಶೇಖರ್ ತಂಡದಿಂದ ಅಮರ ಕಾವ್ಯ ಕಾರ್ಯಕ್ರಮ ಹೊರಹೊಮ್ಮಿತು. ಚೇಂದಿರ ನಿರ್ಮಲಾ ಬೋಪಣ್ಣ ಪ್ರಾರ್ಥನೆ, ಅನಿತಾ ಕಾರ್ಯಪ್ಪ ಸ್ವಾಗತ, ಡಾ. ಶಿವಪ್ಪ ಅವರಿಂದ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

- ವರದಿ - ಸುದ್ದಿಪುತ್ರ