ಮಡಿಕೇರಿ, ಸೆ. 20: ಸಮಾಜದಲ್ಲಿ ಏನೇ ಸುಧಾರಣೆ, ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಜಾರಿಗೆ ತಂದರೂ ಮೋಸ, ವಂಚನೆ, ನಕಲಿ ರೂಪಗಳು ಒಂದಿಲ್ಲೊಂದು ರೀತಿಯಲ್ಲಿ ತಲೆ ಎತ್ತುತ್ತಲೇ ಇರುತ್ತವೆ. ಅದರಲ್ಲೂ ಖೋಟಾ ನೋಟುಗಳ ಹಾವಳಿಯಂತೂ ರಕ್ತ ಬಿಜಾಸು ರನಂತೆ ಹುಟ್ಟುತ್ತಲೇ ಇರುತ್ತದೆ... ಆದರೆ, ಇಲ್ಲಿ ನಕಲಿ ನೋಟನ್ನು ಮೀರಿ ಅಂಗಡಿಯಲ್ಲಿ ಸಿಗುವ ಮಕ್ಕಳ ಆಟಿಕೆಯ ನೋಟನ್ನು ನೀಡಿ ಸಿಗರೇಟ್ ಕೊಂಡುಕೊಂಡಿರುವ ಪ್ರಸಂಗ ನಡೆದಿದೆ...!

ಮಡಿಕೇರಿಯ ಜಿ.ಟಿ. ವೃತ್ತದಲ್ಲಿರುವ ಜಾರ್ಜ್ ಅವರಿಗೆ ಸೇರಿದ ಜೆ.ಎಂ.ಜೆ. ಸ್ಟೋರ್‍ಗೆ ಆಗಮಿಸಿದ ವ್ಯಕ್ತಿ ರೂ. 80 ಬೆಲೆ ಬಾಳುವ ಸಿಗರೇಟ್ ಪ್ಯಾಕ್ ಕೇಳಿದ್ದಾನೆ. ಅಂಗಡಿಯವರು ಸಿಗರೇಟ್ ನೀಡಿದಾಗ ರೂ. 500ರ ನೋಟನ್ನು ಕೊಟ್ಟಿದ್ದಾನೆ. ಅಂಗಡಿಯವರು ನೋಟನ್ನು ಹಿಡಿದು ನೋಡುವಷ್ಟರಲ್ಲಿ ವ್ಯಕ್ತಿ ಸಿಗರೇಟಿನೊಂದಿಗೆ ಮಾಯ ವಾಗಿದ್ದಾನೆ. ಅಸಲಿಗೆ ಅದು ನಿಜವಾದ ನೋಟ್ ಆಗಿರದೆ ಮಕ್ಕಳಿಗೆ ಸಂಗ್ರಹಿಸಲು ಅಂಗಡಿಗಳಲ್ಲಿ ಸಿಗುವ ಆಟಿಕೆಯ ನೋಟಾಗಿತ್ತು. ಇನ್ನು ಎಂತೆಂಥ ಬುದ್ಧಿವಂತ ಮೋಸ ಗಾರರಿದ್ದಾರೋ ಈ ಜಗದಲ್ಲಿ..!?

-ಟಿ.ಜಿ. ಸತೀಶ್