ಗೋಣಿಕೊಪ್ಪಲು, ಸೆ. 20: ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತರಿಗೆ ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ವತಿಯಿಂದ 150 ಕ್ವಿಂಟಾಲ್ ಗುಣಮಟ್ಟದ ಅಕ್ಕಿಯನ್ನು ಜಿಲ್ಲೆಯ ಆಯ್ದ ನೆರೆ ಸಂತ್ರಸ್ತರಿಗೆ ಕೊಡಗು ಜಿಲ್ಲಾ ರೈತ ಸಂಘದ ಅದ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ವಿತರಿಸಲಾಯಿತು.

ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಬಿ.ರಾಮಕೃಷ್ಣ ತಾಲೂಕು ಅಧ್ಯಕ್ಷ ಕೆ. ಆತ್ಮಾನಂದ, ಕಾರ್ಯದರ್ಶಿ ಹೆಚ್.ಸಿ.ಮಹೇಶ್, ಬಸವರಾಜ್ ಹಾಗೂ ಕೊಡಗು ಜಿಲ್ಲಾ ರೈತ ಸಂಘದ ಮುಖಂಡರು ನೆರೆ ಪ್ರದೇಶಗಳಾದ ಹೆಬ್ಬೆಟ್ಟಗೇರಿ, ಮಕ್ಕಂದೂರು, ದೇವಸ್ತೂರು, ಕುಂಬಾರಗಡಿಗೆ, ಪ್ರದೇಶಗಳಿಗೆ ಖುದ್ದು ತೆರಳಿ 259 ಸಂತ್ರಸ್ತರ ಮನೆ ಮನೆಗೆ ತಲಾ 50 ಕೆ.ಜಿ.ಅಕ್ಕಿ ಸಾಬೂನು, ಪೇಸ್ಟ್, ಬ್ರಷ್, ಅಡಿಗೆ ಉಪ್ಪು, ವಿತರಿಸಿದರು.

ಕುಗ್ರಾಮಗಳಲ್ಲಿರುವ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು ಕೈ ಸೇರುತ್ತಿಲ್ಲವೆಂಬ ಆರೋಪದ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಮುಖಂಡರಾದ ಮಂಡೇಪಂಡ ಪ್ರವೀಣ್, ಮಚ್ಚಮಾಡ ರಂಜಿ ಪೂಣಚ್ಚ ಕೆಲವು ಮುಖಂಡರು ಕಳೆದ ಒಂದು ತಿಂಗಳಿನಿಂದ ನೆರೆ ಪ್ರದೇಶಕ್ಕೆ ತೆರಳಿ ಸಂಕಷ್ಟದಲ್ಲಿರುವ ಜನರನ್ನು ಗುರುತಿಸಿ ಫಲಾನುಭವಿಯ ಪಟ್ಟಿಗಳನ್ನು ಆಧಾರ್ ಸಂಖ್ಯೆಯ ಮೂಲಕ ಗುರುತಿಸಿ ಪಟ್ಟಿ ತಯಾರಿಸುವ ಕೆಲಸ ನಿರ್ವಹಿಸಿದ್ದರು. ಇದರಿಂದ ಕುಗ್ರಾಮಗಳಲ್ಲಿದ್ದ ಸಂತ್ರಸ್ತರ ಕಷ್ಟಗಳನ್ನು ಪರಿಶೀಲನೇ ನಡೆಸಿದ್ದರು.ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಜಿಲ್ಲೆಯಲ್ಲಿ ಸಂಭವಿಸಿರುವ ಅನಾಹುತದಿಂದ ಕೊಡಗಿನ ಕೆಲವು ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮಂಡ್ಯ ಜಿಲ್ಲೆಯ ರೈತ ಮುಖಂಡರು ಹಾಗೂ ಅಕ್ಕಿ ಗಿರಣಿ ಮಾಲೀಕರನ್ನು ಭೇಟಿ ಮಾಡುವ ಮೂಲಕ ಕೊಡಗಿನ ಜನರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲೆಯ ಸಮಸ್ಯೆಗೆ ಸ್ಪಂಧಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ರೈತ ಮುಖಂಡರುಗಳು ಹಾಗೂ ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಪಧಾಧಿಕಾರಿಗಳು ಮಡಿಕೇರಿಯಿಂದ ನೆರೆ ಸಂತ್ರಸ್ತರ ಪ್ರದೇಶಗಳಾದ ಮುಕ್ಕೋಡ್ಲುವಿನಿಂದ ವಾಹನಗಳಲ್ಲಿ ತೆರಳಿ ಕುಗ್ರಾಮಗಳಾದ ಸೂರ್ಲಬ್ಬಿ ಸಮೀಪದ ಕುಂಬಾರ ಗಡಿಗೆ ಪ್ರದೇಶಗಳಿಗೆ ಆಹಾರ ಸಾಮಗ್ರಿಗಳನ್ನು ಖುದ್ದು ವಿತರಿಸಿದರು. ನೆರೆ ಸಂತ್ರಸ್ತರು ತಮಗಾದ ನೋವುಗಳನ್ನು ರೈತ ಮುಖಂಡರೊಂದಿಗೆ ಹಂಚಿಕೊಂಡರು. ಜಿಲ್ಲಾಡಳಿತದ ಮೂಲಕ ಸವಲತ್ತು ಗಳನ್ನು ಕೊಡಿಸುವಂತೆ ಮನವಿ ಮಾಡಿಕೊಂಡರು. 150 ನಿರಾಶ್ರಿತ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿರುವ ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಗೆ 75 ಚೀಲ ಪ್ರದೇಶಗಳಿಗೆ ಆಹಾರ ಸಾಮಗ್ರಿಗಳನ್ನು ಖುದ್ದು ವಿತರಿಸಿದರು. ನೆರೆ ಸಂತ್ರಸ್ತರು ತಮಗಾದ ನೋವುಗಳನ್ನು ರೈತ ಮುಖಂಡರೊಂದಿಗೆ ಹಂಚಿಕೊಂಡರು. ಜಿಲ್ಲಾಡಳಿತದ ಮೂಲಕ ಸವಲತ್ತು ಗಳನ್ನು ಕೊಡಿಸುವಂತೆ ಮನವಿ ಮಾಡಿಕೊಂಡರು. 150 ನಿರಾಶ್ರಿತ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿರುವ ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಗೆ 75 ಚೀಲ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಚೋನಿರ ಸತ್ಯ, ಮುಖಂಡರಾದ ಪುಚ್ಚಿಮಾಡ ಸುಭಾಶ್, ಮಲ್ಚೀರ ಗಿರೀಶ್, ಮಲ್ಚೀರ ಅಶೋಕ್, ಮಲ್ಚೀರ ಅನಿಲ್, ಮಲ್ಚೀರ ಹರೀಶ್, ಮಲ್ಚೀರ ಹ್ಯಾರಿ, ಮಚ್ಚಮಾಡ ರಂಜಿ, ಐಯ್ಯಮಾಡ ಹ್ಯಾರಿ ಸೋಮೇಶ್, ತೀತರಮಾಡ ಸುನೀಲ್, ತೀತರಮಾಡ ರಾಜ, ಚಂಗುಲಂಡ ರಾಜಪ್ಪ, ಚಂಗುಲಂಡ ಪೊನ್ನಪ್ಪ, ಬಾದುಮಂಡ ಮಹೇಶ್, ಬಾರಿಯಂಡ ಜಯಂತ್, ಮನೆಯಪಂಡ ಪೊನ್ನಪ್ಪ, ಮಂಡೇಪಂಡ ಅರ್ಜುನ, ಚೀಯಕ್‍ಪೂವಂಡ ಮಿಥುನ್, ಚೀಯಕ್‍ಪೂವಂಡ ವೇಣು ತಮ್ಮಯ್ಯ, ಕೊಂಗೇರ ಗಣಪತಿ, ಪುಚ್ಚಿಮಾಡ ಸುನೀಲ್, ಪುಚ್ಚಿಮಾಡ ರನ್ನು, ಪಪ್ಪು ತಮ್ಮಯ್ಯ, ಕಿರಣ್ ಜೋಸೆಫ್, ಅಪ್ಪಾರಂಡ ನೀರಜ್ ಅಪ್ಪಣ್ಣ, ಕೆ.ಎಸ್.ಸೂರಜ್, ಸುನೀಲ್, ಜಯಂತ್ ಚಿಣ್ಣಪ್ಪ, ಮಂಡೆಪಂಡ ಅರ್ಜುನ್ ತಿಮ್ಮಯ್ಯ, ಮುಂತಾದವರು ಹಾಜರಿದ್ದರು. -ಹೆಚ್.ಕೆ. ಜಗದೀಶ್

.