ಸೋಮವಾರಪೇಟೆ, ಸೆ. 19: ಪ್ರವಾಹ ಪೀಡಿತ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆ ಯಾಗಿರುವ ವಿಶೇಷ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಹಾನಗಲ್ಲು ಗ್ರಾ.ಪಂ. ಕಚೇರಿಯಲ್ಲಿ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 520 ಮಂದಿ ಫಲಾನುಭವಿಗಳಿಗೆ ಕಿಟ್ ಆಗಮಿಸಿದ್ದು, ಎಲ್ಲರಿಗೂ ಟೋಕನ್ ನೀಡಲಾಗಿದೆ. ಈಗಾಗಲೇ 400ಕ್ಕೂ ಅಧಿಕ ಫಲಾನುಭವಿಗಳು ಕಿಟ್ ಪಡೆದುಕೊಂಡಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್ ತಿಳಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಸದಸ್ಯ ಶಿವಪ್ಪ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್, ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.