ಮಡಿಕೇರಿ,ಸೆ. 19: ನರಿಯಂದಡ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ನರಿಯಂದಡ ಗ್ರಾಮದ ಬ್ಲಾಕ್ (1) ಮತ್ತು (2), ಕರಡ, ಅರಪಟ್ಟು, ಕೋಕೇರಿ, ಚೇಲವಾರ ಗ್ರಾಮಗಳ ವಾರ್ಡ್ ಸಭೆ ನಿಗದಿಯಾಗಿದೆ. ಆಯಾಯಾ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ತಾ. 20 ರಿಂದ 24 ರವರೆಗೆ ಮತ್ತು ಗ್ರಾಮ ಸಭೆ ತಾ. 25 ರಂದು ಪಂಚಾಯಿತಿ ಅಧ್ಯಕ್ಷರಾದ ಬೇಬಿ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ವಾರ್ಡ್ ಸಭೆಗಳು : ತಾ. 20 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಈ. ಶಾಂತಿ ಅಧ್ಯಕ್ಷತೆಯಲ್ಲಿ ಕೋಕೇರಿಯ ಮಹಿಳಾ ಸಮಾಜ ಕಟ್ಟಡದಲ್ಲಿ ನಡೆಯಲಿದೆ. ತಾ. 20 ರಂದು ಅಪರಾಹ್ನ 2.30 ಗಂಟೆಗೆ ಟಿ.ಪಿ. ಅನಂತ್‍ಕುಮಾರ್ ಅಧ್ಯಕ್ಷತೆಯಲ್ಲಿ ಚೆಯ್ಯಂಡಾಣೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಲಿದೆ. ತಾ. 22 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಜೆ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಕಡಂಗ ಅರಪಟ್ಟು ಪೊದವಾಡ ವಿ.ಎಸ್.ಎಸ್. ಎನ್. ಸಭಾಂಗಣದಲ್ಲಿ ನಡೆಯಲಿದೆ. ತಾ. 22 ರಂದು ಅಪರಾಹ್ನ 2.30 ಗಂಟೆಗೆ ಗ್ರಾ.ಪಂ. ಅಧ್ಯಕ್ಷರಾದ ಬೇಬಿ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಕರಡದ ಮಹಿಳಾ ಸಮಾಜ ಕಟ್ಟಡದಲ್ಲಿ ನಡೆಯಲಿದೆ. ತಾ. 24 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾ.ಪಂ. ಸದಸ್ಯ ಎಂ.ಪಿ. ಸೋಮಣ್ಣ ರವಿ ಅವರ ಅಧ್ಯಕ್ಷತೆಯಲ್ಲಿ ಪೊನ್ನೋಲ, ಚೇಲಾವರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಗ್ರಾಮ ಸಭೆ: ತಾ. 25 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾ.ಪಂ. ಅಧ್ಯಕ್ಷರಾದ ಬೇಬಿ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನರಿಯಂದಡ, ಚೆಯ್ಯಂಡಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.