ಒಡೆಯನಪುರ, ಸೆ. 19: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಪಿ. ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ ಭಾಗವಹಿಸಿದ ಸಹಕಾರಿಗಳು ಸಂಘದ ಆಡಳಿತ ಮಂಡಳಿಯವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ. ಚಿಣ್ಣಪ್ಪ ಸಂಘದ ವಾರ್ಷಿಕ ವರದಿ ಮಂಡಿಸಿ, 2017-18ನೇ ಸಾಲಿನಲ್ಲಿ ಸಂಘವು ರೂ. 20 ಲಕ್ಷದ 15 ಸಾವಿರ ನಿವ್ವಳ ಲಾಭಗಳಿಸಿದೆ ಎಂದರು.

ಸಂಘದ ಅಧ್ಯಕ್ಷ ಹೆಚ್.ಪಿ. ಶೇಷಾದ್ರಿ ಮಾತನಾಡಿ, ಸಂಘದಲ್ಲಿ ಆಡಳಿತ ಮಂಡಳಿ ಯೊಂದಿಗೆ ಸಂಘದ ಸದಸ್ಯರುಗಳು ಸಹಕರಿಸಿದ್ದರಿಂದ ಸಂಘವು ಉನ್ನತ್ತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯದತ್ತ ಸಾಗುತ್ತಿದೆ, ಪ್ರತಿಯೊಬ್ಬರೂ ಇದೆರೀತಿ ಸಹಕರಿಸಿದರೆ ಸಂಘವು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಗೊಳ್ಳುತ್ತದೆ ಎಂದರು.

ಪ್ರಸ್ತುತ ಸಾಲಿನಲ್ಲಿ ಸಂಘವು ಸುಮಾರು 20 ಲಕ್ಷ ರೂ. ನಷ್ಟು ನಿವ್ವಳ ಲಾಭಗಳಿಸಿ ಮುನ್ನೆಡೆಯುತ್ತಿದೆ, ಈ ನಿಟ್ಟಿನಲ್ಲಿ ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಸಂಘಕ್ಕೆ ಮತ್ತಷ್ಟು ಬಲ ಬರುತ್ತದೆ ಹಾಗೂ ರೈತರ ಅನುಕೂಲಕ್ಕಾಗಿ ರಸಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದ್ದು ರೈತರು ಇವುಗಳನ್ನು ಸದ್ಬಳಕೆ ಮಾಡಿ ಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಸರಳಾಕ್ಷಿ, ನಿರ್ದೇಶಕರುಗಳಾದ ಡಿ.ಬಿ. ಧರ್ಮಪ್ಪ, ಎನ್.ಬಿ. ನಾಗಪ್ಪ, ಹೆಚ್.ಪಿ. ಮೋಹನ್, ಎನ್.ಆರ್. ಪುಟ್ಟಯ್ಯ, ಜಿ.ಬಿ. ಲಿಂಗರಾಜು, ಎಸ್.ಆರ್. ಕಾರ್ತಿಕ್, ಎಂ.ಎಸ್. ತಂಗಮ್ಮ, ಸಿ.ಪಿ. ತೀರ್ಥನಂದ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಪಿ. ಚಿಣ್ಣಪ್ಪ, ಸಂಘದ ಮೇಲ್ವಿಚಾರಕ ಎಸ್.ಡಿ. ಶಶಿಕುಮಾರ್ ಮುಂತಾದವರು ಹಾಜರಿದ್ದರು.

ಮಹಾಸಭೆಯ ಚರ್ಚೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಹಕಾರಿಗಳಾದ ಎಸ್.ಎಂ. ಉಮಾಶಂಕರ್, ಹೆಚ್.ಎಸ್. ಸುಬ್ಬಪ್ಪ, ಡಿ.ಬಿ. ವಸಂತ್, ಎಂ.ಎನ್. ರಾಜಪ್ಪ ಮುಂತಾದವರು ಚರ್ಚಿಸಿದರು.