ಕೂಡಿಗೆ, ಸೆ. 19: ಹೆಬ್ಬಾಲೆ ಗ್ರಾ.ಪಂ.ಯ ಅನುದಾನದಲ್ಲಿ ಶೇ. 25 ರಷ್ಟು ಅನುದಾನವನ್ನು ಗ್ರಾ.ಪಂ.ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿವಿಧ ಯೋಜನೆಗಳಿಗೆ ಅನುಕೂಲವಾಗುವಂತೆ ವಿತರಿಸಲಾಗುತ್ತಿದೆ.
ಈ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಶವಸಂಸ್ಕಾರಕ್ಕಾಗಿ ರೂ. 5000, ಹೆಣ್ಣು ಮಕ್ಕಳ ವಿವಾಹಕ್ಕೆ ರೂ. 5000, ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ರೂ. 5000, ವೈದ್ಯಕೀಯ ಸಹಾಯಕ್ಕೆ ರೂ. 5000 ನೀಡಲಾಗುತ್ತಿದೆ. ಅದರಂತೆ ಕಳೆದ ವಾರ ಮೃತಪಟ್ಟ ವೆಂಕಟೇಶ್ ರೆಡ್ಡಿ ಅವರ ಕುಟುಂಬಕ್ಕೆ ಗ್ರಾ.ಪಂ. ಅಧ್ಯಕ್ಷೆ ಲತಾ ರೂ. 5000 ಚೆಕ್ ವಿತರಿಸಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಮಂಜುಳಾ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಕೇಶ್ ಇದ್ದರು.