ಮಡಿಕೇರಿ, ಸೆ.19 : ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರಿಗೆ ಜಾತಿ ಮತ ಭೇದಗಳಿಲ್ಲದೆ ಸುಂಟಿಕೊಪ್ಪದಲ್ಲಿ ಜಿ.ಪಂ ಸದಸ್ಯ ಲತೀಫ್ ಅವರು ದಾನವಾಗಿ ನೀಡಿರುವÀ ಒಂದು ಎಕರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಿರು ವದಾಗಿ ಸುನ್ನಿ ಯುವಜನ ಸಂಘದ ಜಿಲ್ಲಾ ಸಮಿತಿಯ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಯು.ಹನೀಫ್ ಸಖಾಫಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪ ಮತ್ತು ಪ್ರವಾಹದ ಪರಿಸ್ಥಿತಿ ಗಳಿಂದ ಸಂಕಷ್ಟಕ್ಕೆ ಸಿಲುಕಿ ದವರಿಗೆ ಎಸ್ವೈಎಸ್ನ ಸಾಂತ್ವನ ವಿಭಾಗ ನೆರವಿನ ಹಸ್ತವನ್ನು ನೀಡುವ ಮೂಲಕ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಿರುವದಾಗಿ ತಿಳಿಸಿದರು.
ಸುನ್ನಿ ಮ್ಯಾನೇಜ್ಮೆಂಟ್ ಜಿಲ್ಲಾಧ್ಯಕ್ಷರು ಹಾಗೂ ಜಿ.ಪಂ ಸದಸ್ಯ ಸುಂಟಿಕೊಪ್ಪದÀ
(ಮೊದಲ ಪುಟದಿಂದ) ಪಿ.ಎಂ.ಲತೀಫ್ ಅವರು ಒಂದು ಎಕರೆ ಜಾಗವನ್ನು ಜಿಲ್ಲಾ ಸಂಯುಕ್ತ ಖಾಝಿ ಹಾಗೂ ಅಖಿಲ ಭಾರತ ಜಂಇಯ್ಯತ್ತುಲ್ ಉಲೆಮಾದ ಪ್ರಧಾನ ಕಾರ್ಯದರ್ಶಿಗಳಾದ ಎ.ಪಿ.ಉಸ್ತಾದ್ ಅವರ ಮೂಲಕ ಎಸ್ವೈಎಸ್ಗೆ ಹಸ್ತಾಂತರಿಸಿದ್ದಾರೆ. ಲಭ್ಯ ಜಾಗದಲ್ಲಿ ಸರ್ಕಾರ ಮತ್ತು ಎಲ್ಲರ ಸಹಕಾರದೊಂದಿಗೆ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವದು ಎಂದು ತಿಳಿಸಿದರು.
ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ಹೊತ್ತಿರುವ ಎಸ್ವೈಎಸ್ ಸಂಘಟನೆ, ಮಹಾಮಳೆಯಿಂದ ಹಾನಿಗೊಳಗಾದ 25 ಮನೆಗಳ ದುರಸ್ತಿ ಕಾರ್ಯ ನಡೆಸಲು ನಿರ್ಧಾರ ತಳೆÉದು, ಈಗಾಗಲೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.
ಎಸ್ವೈಎಸ್ನ ಈ ಎಲ್ಲಾ ಸೇವಾ ಕಾರ್ಯಗಳಿಗೆ ಜಿಲ್ಲೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್, ಸುನ್ನಿ ಜಂಇಯ್ಯತ್ತುಲ್ ಮುಅಲ್ಲಿಮೀನ್, ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷÀನ್, ಸುನ್ನಿ ಮಹಲ್ ಜಮಾಅತ್, ಅನಿವಾಸಿ ಸಂಘಟನೆಗಳಾದ ಕರ್ನಾಟಕ ಕಲ್ಚರಲ್ ಫೌಂಡೇಷನ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷÀನ್ ನೆರವನ್ನು ಸ್ಮರಿಸಿದ ಹನೀಫ್ ಸಖಾಫಿ, ಮುಂದಿನ ಎಲ್ಲಾ ಸೇವಾ ಕಾರ್ಯಗಳಿಗೆ ಈ ಸಂಘಟನೆಗಳು ಸಹಕಾರದ ಭರವಸೆಯನ್ನು ನೀಡಿರುವದಾಗಿ ತಿಳಿಸಿದರು.
ಜಿಲ್ಲೆಯ ವಿವಿಧೆÉಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ಅರ್ಹ ಫಲಾನುಭವಿ ಕುಟುಂಬಗಳಿಗೆ ಸಂಘಟನೆಯು ಬ್ರಾಂಚ್ಗಳ ಮೂಲಕ ಸುಮಾರು ರೂ. 25 ಲಕ್ಷಗಳಿಗೂ ಹೆಚ್ಚಿನ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಲಕ್ಷಾಂತರ ಮೌಲ್ಯದ ಬಟ್ಟೆ ಹಾಗೂ ಇತರ ಅವಶ್ಯಕ ವಸ್ತುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಪಿ.ಎಂ.ಲತೀಫ್ ಅವರು ವಿಕೋಪದ ಸಂದರ್ಭ ಜೋಡುಪಾಲ ಹಾಗೂ ಮದೆನಾಡು ಪ್ರದೇಶಗಳಲ್ಲಿ ತೊಂದರೆಗೆ ಸಿಲುಕಿದವರ ರಕ್ಷಣೆಗಾಗಿ ತಮ್ಮ ತಂಡದೊಂದಿಗೆ ಜೀವÀದ ಹಂಗು ತೊರೆದು ಶ್ರಮಿಸಿದ್ದಾರೆ. ಇದರೊಂದಿಗೆ ಒಂದು ಎಕರೆ ಜಾಗವನ್ನು ನಿರ್ವಸತಿಗರ ಪುನರ್ವಸತಿಗೆ ದಾನವಾಗಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ವೈಎಸ್ನಿಂದ ಲತೀಫ್ರಿಗೆ ಸೇವಾ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಾರ್ಯ ಉತ್ತಮ : ಪ್ರಾಕೃತಿಕ ವಿಕೋಪದ ಸಂದರ್ಭ ಜಿಲ್ಲೆಯ ಮತ್ತು ರಾಜ್ಯದ ಜನತೆ ಕೊಡಗಿನ ಸಂತ್ರಸ್ತರಿಗೆ ನೀಡಿದ ಸಹಾಯ ಹಸ್ತ ಅತ್ಯಂತ ಪ್ರಶಂಸನೀಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಕಾರ್ಯಚಟುವಟಿಕೆ ಶ್ಲಾಘನೀಯ ಎಂದು ಪಿ.ಯು. ಹನೀಫ್ ಸಖಾಫಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಎಂ.ವೈ. ಅಬ್ದುಲ್ ಹಫೀಳ್ ಸಅದಿ ಹಾಗೂ ಸುನ್ನಿ ಮಹಲ್ ಜಮಾಅತ್ನ ಪಿ.ಎ. ಯೂಸುಫ್ ಕೊಂಡಂಗೇರಿ ಉಪಸ್ಥಿತರಿದ್ದರು.