ಮಡಿಕೇರಿ, ಸೆ. 19: ಇಲ್ಲಿನ ಉಪ ವಿಭಾಗಾಧಿ ಕಾರಿ ನಂಜುಂಡೇಗೌಡ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದ್ದು, ತೆರವಾಗಿರುವ ಸ್ಥಾನಕ್ಕೆ ನೂತನ ಅಧಿಕಾರಿ ಜವರೇಗೌಡ ಅವರು ನೇಮಕಗೊಂಡು ಇಂದು ಅಧಿಕಾರ ಸ್ವೀಕರಿಸಿದ್ದಾರೆ.(ಮೊದಲ ಪುಟದಿಂದ) ಮೈಸೂರು ನಗರ ಪಾಲಿಕೆ ವಲಯ ಆಯುಕ್ತರಾಗಿದ್ದ ಜವರೇಗೌಡ ಅವರು ಈ ಹಿಂದೆ ಮಂಡ್ಯ, ಕೆ.ಆರ್. ನಗರ, ಟಿ. ನರಸೀಪುರ, ಮೈಸೂರು ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ನಂಜುಂಡೇಗೌಡ ಅವರಿಗೆ ಸರಕಾರದಿಂದ ಸ್ಥಳ ನಿಯೋಜನೆಗೊಂಡಿಲ್ಲ. ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಅವರನ್ನು ಪಿರಿಯಾಪಟ್ಟಣಕ್ಕೆ ವರ್ಗಾಯಿಸಿರುವ ಸರಕಾರ, ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರನ್ನು ಸೋಮವಾರಪೇಟೆಗೆ ವರ್ಗಾಯಿಸಿದೆ. ಪ್ರಸಕ್ತ ಸುಳ್ಯ ತಹಶೀಲ್ದಾರ್ ಆಗಿರುವ ಕುಞ್ಞಮ್ಮ ಅವರನ್ನು ವೀರಾಜಪೇಟೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.