ಮಡಿಕೇರಿ, ಸೆ. 18: ವೀರಾಜಪೇಟೆ ಮಲಬಾರ್ ರಸ್ತೆಯಲ್ಲಿರುವ ಇಗ್ಗುತಪ್ಪ ಕೊಡವ ಸಂಘದ ವತಿಯಿಂದ ತಾ. 28 ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕೈಲ್ ಮುಹೂರ್ತ ಹಬ್ಬ ಮತ್ತು ಸಂತೋಷ ಕೂಟವನ್ನು ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದ ಪರಿಣಾಮ ರದ್ದು ಮಾಡಲಾಗಿದೆ. ಈ ಪ್ರಯುಕ್ತ ಸದಸ್ಯರಿಂದ ಸಂಗ್ರಹಿಸಲಾದ ಹಣವನ್ನು ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ನೀಡಲು ಸರ್ವ ಸದಸ್ಯರು ತೀರ್ಮಾನಿಸಿ ದ್ದಾರೆಂದು ಸಂಘದ ಅಧ್ಯಕ್ಷ ನೆಲ್ಲಮಕ್ಕಡ ಸಿ. ಬೆಳ್ಯಪ್ಪ ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.