ಕುಶಾಲನಗರ, ಸೆ. 18: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ 2018 ನೇ ಸಾಲಿನ ಮೇ ತಿಂಗಳಲ್ಲಿ ನಡೆದ ಭರತನಾಟ್ಯ ಹಾಗೂ ಸಂಗೀತ ಪರೀಕ್ಷೆಯಲ್ಲಿ ಕುಶಾಲನಗರ ಕಾವೇರಿ ಕಲಾ ಪರಿಷತ್‍ನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಕೆ.ಎಸ್.ಪ್ರಗತಿ ಶೇ 95.5 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ, ಎಂ.ಎಸ್.ಸ್ಪರ್ಶ ಶೇ 88.5 ಅಂಕಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ, ಆರ್.ಭೂಮಿಕಾ ಶೇ.88 ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಸಂಗೀತ ಜ್ಯೂನಿಯರ್ ವಿಭಾಗದಲ್ಲಿ ಕೆ.ಸಿ.ನಿಶಾಂತ್ ಶೇ 78.5 ಅಂಕದೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ, ಭರತನಾಟ್ಯ ವಿದ್ವತ್ ಪೂರ್ವ ವಿಭಾಗದಲ್ಲಿ ದೇಚಮ್ಮ ಶೇ.58 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸ್ಥಳೀಯ ಕಾವೇರಿ ಕಲಾ ಪರಿಷತ್‍ನ ವಿದ್ಯಾರ್ಥಿಗಳಾಗಿದ್ದು ವಾಣಿ ಯಶವಂತ್ ಮತ್ತು ಧನಲಕ್ಷ್ಮಿ ಅವರ ಶಿಷ್ಯರಾಗಿದ್ದಾರೆ.