ಗೋಣಿಕೊಪ್ಪಲು, ಸೆ. 18: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ವಾರ್ಡ್‍ಸಭೆ ತಾ. 19 ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ಬಲ್ಯಮುಂಡೂರುವಿನ ವಾರ್ಡ್‍ನ ಸದಸ್ಯ ಕೆ.ಸಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ, ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ಮುಗುಟಗೇರಿ ಹಾಗೂ ನಡಿಕೇರಿ ಗ್ರಾಮದ ವಾರ್ಡ್ ಸಭೆ ಸದಸ್ಯೆ ಬಿ.ಎಸ್. ಪವಿತ್ರ ಅಧ್ಯಕ್ಷತೆಯಲ್ಲಿ ಕಲ್ಲುಕೋರೆ ಸಮುದಾಯ ಭವನದಲ್ಲಿ ಹಾಗೂ ಅಪರಾಹ್ನ 2 ಗಂಟೆಗೆ ತೂಚಮಕೇರಿ ಹಾಗೂ ಚಿಕ್ಕಮುಂಡೂರು ಗ್ರಾಮದ ವಾರ್ಡ್ ಸಭೆ ಸಮುದಾಯ ಭವನದಲ್ಲಿ ವಾರ್ಡ್‍ನ ಸದಸ್ಯರಾದ ಪ್ರೀತ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.