ಆಲೂರು-ಸಿದ್ದಾಪುರ, ಸೆ. 18: ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಗೌರಿ-ಗಣೇಶ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಆಚರಿಸಿದ ಗೌರಿ-ಗಣೇಶೊತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಗ್ರಾಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಂಚಾಯಿತಿ ಸದಸ್ಯ ತೀರ್ಥಕುಮಾರ್, ಈ ಗ್ರಾಮಕ್ಕೆ ಹೆಚ್ಚು ಕೆಲಸ ಮಾಡಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುತ್ತೇವೆ ಹಾಗೂ ಸಚಿವರನ್ನು ಶಾಸಕರನ್ನು ಭೇಟಿ ಮಾಡಿ ಈ ಗ್ರಾಮದಲ್ಲಿ ಹಾಳಾಗಿರುವ ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಸೆಳೆಯಲಾಗುವದು ಎಂದರು.

ಈ ಸಂದರ್ಭ ಗೌರಿ-ಗಣೇಶ ಸೇವಾ ಸಮಿತಿಯ ಅಧ್ಯಕ್ಷ ರಾಮಕುಟ್ಟಿ, ಹಿರಿಯರಾದ ಈರಪ್ಪ, ತಂಗಮ್ಮ ಹಾಗೂ ಗುರುಲಿಂಗಪ್ಪ ಇತರರಿದ್ದರು. ಈ ಸಂದರ್ಭ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.