ಭಾಗಮಂಡಲ, ಸೆ. 18: ಭಾಗಮಂಡಲದ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ವತಿಯಿಂದ ಸದಸ್ಯರಿಗೆ ಮತ್ತು ರೈತರಿಗೆ ವಿವಿಧ ಕೃಷಿ ಉತ್ಪನ್ನಗಳ ಇಳುವರಿಗೆ ಹಾಗೂ ಕಾಯಿಲೆಗಳ ನಿಯಂತ್ರಣಕ್ಕೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
ಕಾಳುಮೆಣಸಿಗೆ ಬಾಧಿಸುವ ಹಳದಿ ರೋಗ ಹಾಗೂ ಸೊರಗು ರೋಗ ಅಡಿಕೆ ಬೆಳೆಗೆ ಬಾಧಿಸುವ ಕೊಳೆರೋಗ ಹಾಗೂ ಸುಳಿರೋಗ ನಿಯಂತ್ರಣಕ್ಕೆ ಅಗತ್ಯವಾದ ಔಷದೋಪಚಾರ ಹಾಗೂ ಪೋಷಕಾಂಶ ನಿರ್ವಹಣೆ ಬಗ್ಗೆ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಕಂಪೆನಿ ಉಪಾಧ್ಯಕ್ಷ ಬಿ.ಎಂ. ಕಿಶೋರ್ ಅಡಿಕೆ ಕೃಷಿಯ ಬಗ್ಗೆ, ಪಟ್ಟಮಾಡ ಕುಶಾಲಪ್ಪ ಕಾಳುಮೆಣಸಿನ ಬಳ್ಳಿಗಳ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ 150 ಜನ ಸದಸ್ಯರು ಹಾಗೂ ರೈತರು ಪಾಲ್ಗೊಂಡಿದ್ದರು. ಕಂಪೆನಿ ಅಧ್ಯಕ್ಷ ಕೋಡಿ ಕೆ. ಪೊನ್ನಪ್ಪ, ಉಪಾಧ್ಯಕ್ಷ ಬಿ.ಎಂ. ಕಿಶೋರ್, ನಿರ್ದೇಶಕರಾದ ಟಿ.ಎಂ. ಹರ್ಷ, ಹ್ಯಾರಿ ತಮ್ಮಯ್ಯ, ಜಗದೀಶ್, ನಾಗೇಂದ್ರ, ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ದೇವಂಗೋಡಿ ಬಿನ್ನಿ, ಮತ್ತಿತರರು ಉಪಸ್ಥಿತರಿದ್ದರು.