ಗೋಣಿಕೊಪ್ಪ ವರದಿ, ಸೆ. 17: ವಿಶ್ವಕರ್ಮ ಜಯಂತಿಯನ್ನು ಗೋಣಿಕೊಪ್ಪ ವಿಶ್ವಕರ್ಮ ಘಟಕದ ವತಿಯಿಂದ ದೇವರಪುರ ಅಮೃತವಾಣಿ ಶ್ರವಣದೋಷ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ನಂತರ ವಿದ್ಯಾರ್ಥಿಗಳೊಂದಿಗೆ ಸಹಭೋಜನ ನಡೆಯಿತು. ಈ ಸಂದರ್ಭ ಗೋಣಿಕೊಪ್ಪ ವಿಶ್ವಕರ್ಮ ಘಟಕ ಅಧ್ಯಕ್ಷ ವಿನೋದ್, ಗೌ. ಅಧ್ಯಕ್ಷ ಪ್ರಭಾಕರ್, ಉಪಾಧ್ಯಕ್ಷ ರಾಜ, ಕಾರ್ಯದರ್ಶಿ ರಾಘವ, ಖಜಾಂಜಿ ಮನು, ಸದಸ್ಯ ಸುಬ್ರಮಣಿ ಹಾಗೂ ಮಹಿಳಾ ಘಟಕ ಅಧ್ಯಕ್ಷೆ ವಿಮಲಾ ರಾಜಮಣಿ ಪಾಲ್ಗೊಂಡಿದ್ದರು.