ಕೂಡಿಗೆ, ಸೆ. 17: ಕಾಲೇಜು ಮಟ್ಟದ ವಿದ್ಯಾರ್ಥಿಗಳ ಅಥ್ಲೇಟಿಕ್‍ನಲ್ಲಿ ಕೂಡಿಗೆಯ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಸಿ.ಎಂ.ಶೈಲಾ ಇತ್ತೀಚೆಗೆ ಮೂಡಬಿದ್ರೆಯಲ್ಲಿ ನಡೆದ ರಾಜ್ಯಮಟ್ಟದ 800 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದಿದ್ದಾಳೆ. ಹಾಗೂ ಮಿಡ್ಲೆ ರಿಲೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. 800 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು, ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಅಥ್ಲೇಟಿಕ್‍ಗೆ ಆಯ್ಕೆಯಾಗಿದ್ದಾಳೆ. ಈ ಕ್ರೀಡಾಪಟುಗೆ ಕೂಡಿಗೆ ಕ್ರೀಡಾಶಾಲೆಯ ಅಂತೋಣಿ ಡಿಸೋಜ, ನಿಖಿಲ್ ಜೋಸೇಫ್ ಅವರು ತರಬೇತಿ ನೀಡಿದ್ದಾರೆ.