ಮಡಿಕೇರಿ, ಸೆ. 17: ಶಾಲಾಭಿವೃದ್ಧಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸಮಿತಿ ಸರಕಾರಿ ಪ್ರೌಢಶಾಲೆ ಚೆಂಬು ಇದರ ಆಶ್ರಯದಲ್ಲಿ ಕಳೆದ 7 ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಯಲ್ಲೀ 100 ಫಲಿತಾಂಶವನ್ನು ದಾಖಲಿಸಲು ಕಾರಣಕರ್ತರಾದ ಅಧ್ಯಾಪಕ ವೃಂದದವರಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ದೇಜಮ್ಮ, ಶಿಕ್ಷಕರಾದ ಕಾಮಾಕ್ಷಿ, ಮಮತಾ, ಯೋಗೀಶ್, ಸರಿತಾ ನಂದಪೋಳ, ಜ್ಯೋತಿ ಶೆಟ್ಟಿ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಕಮಲ, ಅಡುಗೆ ಸಿಬ್ಬಂದಿಗಳಾದ ಕಮಲ ಮತ್ತು ತಿಲಕ ಇವರನ್ನು ಸನ್ಮಾನಿಸ ಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆದ ವಿದ್ಯಾರ್ಥಿ ಗಳಾದ ಸುಪ್ರಿತಾ, ಸೃಜನ್, ಕೃತಿ ಕೆ.ಎಸ್., ಪ್ರತೀಕ, ರಮ್ಯಶ್ರೀ ಹಿತಾ ಪಿ. ಎನ್. ಇವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಶಿಕಲಾ ಕೆ.ಎಸ್. ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ದೇಜಮ್ಮ, ಎಸ್‍ಡಿಎಂಸಿ ಸದಸ್ಯರಾದ ಭುವನೇಶ್ವರ, ಮಾಚಯ್ಯ ಚೆಂಡಡ್ಕ, ಕುಸುಮಾವತಿ, ಲಕ್ಷ್ಮೀಶ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನುರಾಜ್ ಊರುಪಂಜ ಸ್ವಾಗತಿಸಿ, ರಶ್ಮಿ ಪನ್ನೆಡ್ಕ ವಂದಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.