ಮಡಿಕೇರಿ, ಸೆ. 17: ಹಲವೆಡೆ ಜೀವನ ದುಸ್ತರ ಮಾಡಿದ ಮಹಾಮಳೆ ಜೋಡುಪಾಲದ ಮೀಸಲು ಅರಣ್ಯದಲ್ಲಿ ಹೊಸ ನದಿ, ಹೊಸ ಕಣಿವೆ, ಅದ್ಭುತ ನೀರ ಝರಿಗಳನ್ನು ಸೃಷ್ಟಿಸಿದೆ.ದೇವರಕೊಲ್ಲಿ ಅರಣ್ಯ ಶ್ರೇಣಿಯಲ್ಲಿರುವ ಎತ್ತರದ ಕಲ್ಲಡ್ಪೆ ಬೆಟ್ಟದ ಬುಡ ಕುಸಿದಿದೆ. ನೀರು ಉಕ್ಕಿದೆ. ಬುಡದಿಂದ ಸುಮಾರು 4-5 ಕಿಲೋಮೀಟರ್ ದೂರದವರೆಗೆ ಆಗಸದೆತ್ತರ ಮರಗಳು, ಬಂಡೆಗಳು ಎನ್ನದೆ ಎದುರಿದ್ದ ಎಲ್ಲಾ ಸೃಷ್ಟಿಯನ್ನೂ ಧ್ವಂಸಗೈಯುತ್ತ ಸಾಗಿ ಮುಖ್ಯ ರಸ್ತೆ ತಲಪಿದೆ. ನೀರಿನ ಮಟ್ಟ ನೂರಾರು ಅಡಿ ಎತ್ತರ ತಲಪಿತ್ತು ಎನ್ನಲು ಬೃಹತ್ ಮರಗಳ ತುದಿಯವರೆಗೆ ಕೆಸರು ಸಿಡಿದಿರುವ ತೊಗಟೆಗಳು ಮೂಕ ಸಾಕ್ಷಿಯಾಗಿವೆ. ಮೀಸಲು ಅರಣ್ಯವಾದುದರಿಂದ, ಮನೆಗಳು, ಜನರು ಇಲ್ಲದ್ದರಿಂದ ಸಾವು - ನೋವು ಸಂಭವಿಸಿಲ್ಲ. (ಮೊದಲ ಪುಟದಿಂದ) ಭೀಕರತೆಯ ಚಿತ್ರಣ ತೆರೆದಿಡುತ್ತವೆ’’ ಎಂದು ಮಹೇಶ್ ‘ಶಕ್ತಿ’ಯೊಂದಿಗೆ ನುಡಿದರು.

ಜೋಡುಪಾಲದಿಂದ ಮುಖ್ಯರಸ್ತೆಯಲ್ಲಿ ಮೂರು ಕಿಲೋಮೀಟರ್ ಮುಂದೆ ತೆರಳಿ, ಬಲಬದಿ ಇಳಿದು ನಡೆಯಬೇಕು. ಪಯಸ್ವಿನಿ ನದಿ ದಾಟಿ ನಿಶಾನೆ ಬೆಟ್ಟದಿಂದ ಮುಂದೆ ಕಲ್ಲಡ್ಪೆ ಬೆಟ್ಟವಿದೆ. ಅದರ ಬುಡದಿಂದ ಹೊಸ ನದಿ ಆರಂಭಗೊಂಡಿದೆ. ಮುಂದೆ ಪಯಸ್ವಿನಿ ನದಿಯನ್ನು ಸೇರುತ್ತಿದೆ. ಆದರೂ ಯಾರೂ ಪ್ರವಾಸದ ಮೋಜಿಗೆಂದು ಇತ್ತ ಹೋಗದಿರುವದು ಉತ್ತಮ, ಯಾಕೆಂದರೆ ಇದು ಪ್ರವಾಸಿ ಕೇಂದ್ರವೂ ಅಲ್ಲ, ಸುರಕ್ಷಿತ ತಾಣವೂ ಅಲ್ಲ.