ಗೋಣಿಕೊಪ್ಪ ವರದಿ, ಸೆ. 17: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬೆಂಗಳೂರು ಎಬಿಸಿ ಕಂಪೆನಿ ಬೂಟ್ ಸ್ಟ್ರಾಪ್ ಸೆಷನ್ ಮತ್ತು ಕ್ಯಾಂಪಸ್ ಹೈರಿಂಗ್ ಹೆಸರಿನಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡರು.

ಎಲೆಕ್ಟ್ರಾನಿಕ್ ವಿಜ್ಞಾನದ ವಿದ್ಯಾರ್ಥಿಗಳಾದ ಎಂ.ಎಂ. ನವ್ಯ, ಎಂ. ಯಶಸ್ವಿನಿ, ಕಂಪ್ಯೂಟರ್ ವಿಜ್ಞಾನದ ಕೆ.ಎಸ್. ಚೆಂಗಪ್ಪ ಉದ್ಯೋಗ ಪತ್ರ ಪಡೆದುಕೊಂಡರು.