ಗೋಣಿಕೊಪ್ಪ ವರದಿ, ಸೆ. 17 : ಕರ್ನಾಟಕ ಐಸಿಎಸ್‍ಇ ಸ್ಕೂಲ್ ಅಸೋಷಿಯೇಷನ್ (ಕೆಇಎಸ್‍ಎ) ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಗೋಣಿಕೊಪ್ಪದ ಕಾಲ್ಸ್ ಶಾಲಾ ತಂಡವು 19 ಪದಕ ಗೆದ್ದು ಸಮಗ್ರ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಸ್‍ಎಸ್‍ಬಿ ಇಂಟರ್‍ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲ್ಸ್‍ನ 36 ಕ್ರೀಡಾಪಟುಗಳು ಪಾಲ್ಗೊಂಡು 10 ಚಿನ್ನ, 4 ಬೆಳ್ಳಿ, 5 ಕಂಚಿನ ಪದಕ ಗಿಟ್ಟಿಸಿಕೊಂಡರು.
ಕಿರಿಯ ಬಾಲಕರ ವಿಭಾಗದಲ್ಲಿ ಕಾಲ್ಸ್‍ನ ಪ್ರಥಮ್ ಕೋಟಿಯನ್ ಗೋಣಿಕೊಪ್ಪ ವರದಿ, ಸೆ. 17 : ಕರ್ನಾಟಕ ಐಸಿಎಸ್‍ಇ ಸ್ಕೂಲ್ ಅಸೋಷಿಯೇಷನ್ (ಕೆಇಎಸ್‍ಎ) ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಗೋಣಿಕೊಪ್ಪದ ಕಾಲ್ಸ್ ಶಾಲಾ ತಂಡವು 19 ಪದಕ ಗೆದ್ದು ಸಮಗ್ರ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಸ್‍ಎಸ್‍ಬಿ ಇಂಟರ್‍ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಾಲ್ಸ್‍ನ 36 ಕ್ರೀಡಾಪಟುಗಳು ಪಾಲ್ಗೊಂಡು 10 ಚಿನ್ನ, 4 ಬೆಳ್ಳಿ, 5 ಕಂಚಿನ ಪದಕ ಗಿಟ್ಟಿಸಿಕೊಂಡರು.
ಕಿರಿಯ ಬಾಲಕರ ವಿಭಾಗದಲ್ಲಿ ಕಾಲ್ಸ್‍ನ ಪ್ರಥಮ್ ಕೋಟಿಯನ್ ಬೆಳ್ಳಿ, ಆದಿತ್ಯಾ ತಿರ್ಲಾಪುರ್ 1500 ಮೀ. ಓಟದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಜೂನಿಯರ್ ಬಾಲಕಿಯರ 3 ಕಿ. ಮೀ. ನಡಿಗೆಯಲ್ಲಿ ಕೆ. ಎಸ್. ನಿಶ್ಚಿತ ಚಿನ್ನ, 800 ಮೀ ಓಟದಲ್ಲಿ ಬಿ. ಡಿ. ದೃತಿ ಕಂಚು ಪಡೆದರು. 19 ವರ್ಷ ದೊಳಗಿನ ಹಿರಿಯ ಬಾಲಕರ 200 ಮೀ. ಮತ್ತು 100 ಮೀ. ಓಟದಲ್ಲಿ ಡಿ. ವಿ. ಅಭಿಷೇಕ್‍ಗೆ ಬೆಳ್ಳಿ, ಬಾಲಕಿಯರ 400 ಮೀ. ಓಟದಲ್ಲಿ ಸಿಮ್ಲಾ ಗಣಪತಿ ಚಿನ್ನ, ಹೈಜಂಪ್‍ನಲ್ಲಿ ಚಿನ್ನ, 100 ಮೀ. ಹರ್ಡಲ್ಸ್‍ನಲ್ಲಿ ಬೆಳ್ಳಿ, ಸಂಜನಾ ಗಿರೀಶ್ ಜಾವಲಿನ್ ಎಸೆತದಲ್ಲಿ ಚಿನ್ನ, 100 ಮೀ. ಹರ್ಡಲ್ಸ್‍ನಲ್ಲಿ ಕಂಚಿನ ಪಡೆದುಕೊಂಡರು.
-ವರದಿ : ಸುದ್ದಿಪುತ್ರ