ಚೆಟ್ಟಳ್ಳಿ, ಸೆ. 17: ಬೆಂಗಳೂರಿನ ಮುಕ್ತ ಫೌಂಡೇಶನ್ ಸಂಸ್ಥೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ 10ನೇ ವರ್ಷದ ಭಾರತ ರತ್ನ ಸರ್ ಎಂ.ವಿಶ್ವೇಶರಯ್ಯ ಅವರ ಜಯಂತ್ಯೋತ್ಸವದಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ, ಸಹ ನಿರ್ದೇಶಕ ಹಾಗೂ ಸಮಾಜವಾದಿ ಪಕ್ಷದ ಕೊಡಗು ಜಿಲ್ಲಾಧ್ಯಕ್ಷ ಚೀಯಂಡಿರ ಕಿಶನ್ ಉತ್ತಪ್ಪನಿಗೆ ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆ, ಸಾಹಿತ್ಯ, ಅಂಗವಿಕಲ, ನೃತ್ಯ, ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ವಿಶ್ವೇಶ್ವರಯ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.