ಕೂಡಿಗೆ, ಸೆ.17 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದ ಕೆ.ಪಿ. ರಮೇಶ ಮನೆಯಲ್ಲಿದ 32 ಸಾವಿರ ರೂ. ಬೆಲೆಯ ಚಿನ್ನಾಭರಣ ಕಳವಾಗಿರುವ ಘಟನೆ ಹುದುಗೂರು ರಮೇಶ್ ನವರ ಮನೆಯಲ್ಲಿ ನಡೆದಿದೆ. ಇವರ ಮನೆಗೆ ಕೈಲ್ ಮುಹೂರ್ತ ಹಬ್ಬಕ್ಕೆ ಬಂದಿದ್ದ ಇವರಿಗೆ ಪರಿಚಯಸ್ಥರಾದÀ ಹಾಲೇರಿ ಗ್ರಾಮದ ಕಿರಣ, ಯಶಸ್ವಿನಿ ಎಂಬವರು ಒಂದು ದಿನ ಹಬ್ಬಕ್ಕಾಗಿ ಇವರ ಮನೆಯಲ್ಲಿ ಉಳಿದುಕೊಂಡಿದ್ದರು. ಕಳೆದ ಎರಡು ದಿನದ ಹಿಂದೆ ಒಂದು ಕಾರ್ಯಕ್ರಮಕ್ಕೆ ಹೋಗಲು ಚಿನ್ನಾಭರಣದ ಕಡೆ ಗಮನ ಹರಸಿ ಮನೆಯಲ್ಲ ನೋಡಿದರು ಕಾಣದಿದ್ದಾಗ ರಮೇಶ್ ಅವರು ತಡವಾಗಿ ಕುಶಾಲನಗರ ಪೊಲೀಸ್ ಠಾಣೆಗೆ ಕಿರಣ, ಯಶಸ್ವಿನಿಯ ಮೇಲೆ ದೂರು ನೀಡಿದ್ದರು. ದೂರಿನ ಮೇರೆಗೆ ಪೋಲಿಸ್ನವರು ಆರೋಪಿಗಳನ್ನು ಪೋಲಿಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಯಿತು. ನಂತರ ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡಿರುತ್ತಾರೆ. ಇವರಿಂದ ಚಿನ್ನಾಭರಣವನ್ನು ವಸೂಲಿ ಮಾಡಿ, ಪೊಲೀಸ್ ನವರು ಕೇಸು ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.