ಮಡಿಕೇರಿ, ಸೆ. 17: ಮಡಿಕೇರಿ ತಾಲೂಕು ಗೂಡ್ಸ್ ಟೆಂಪೋ ಮಾಲೀಕರು ಹಾಗೂ ಚಾಲಕರ ಸಂಘದ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಆರ್. ಮಣಿಕಂಠ ಹಾಗೂ ಕಾರ್ಯದರ್ಶಿಯಾಗಿ ಬಿ.ಎಸ್. ಜಯ ಆಯ್ಕೆಯಾಗಿದ್ದಾರೆ.

ನೂತನ ಆಡಳಿತ ಮಂಡಳಿಯ ಮೂಲಕ ಮುಂದಿನ ದಿನಗಳಲ್ಲಿ ಮಾಲೀಕರು ಹಾಗೂ ಚಾಲಕರ ಅಭ್ಯುದಯಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದೆಂದು ಅಧ್ಯಕ್ಷ ಮಣಿಕಂಠ ಭರವಸೆ ನೀಡಿದರು.