ಮಡಿಕೇರಿ, ಸೆ. 16: ಸಾಮಾಜಿಕ ವಾಗಿ ಮುಂದುವರಿದ ವ್ಯಕ್ತಿಗಳು, ವರ್ಗಗಳನ್ನು (ಕೆನೆಪದರ) ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಲು ಕೆನೆಪದರ ನೀತಿಯ ವಾರ್ಷಿಕ ಆದಾಯ ಮಿತಿಯನ್ನು ರೂ. 6 ಲಕ್ಷದಿಂದ ರೂ. 8 ಲಕ್ಷಕ್ಕೆ ಹೆಚ್ಚಿಸುವ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ.
ಕೆನೆಪದರವನ್ನು ನಿರ್ಣಯಿಸಲು ಹಿಂದುಳಿದ ವರ್ಗಗಳ ಪ್ರವರ್ಗ 2 ಎ, 2ಬಿ, 3ಎ ಮತ್ತು 3ಬಿ ಗಳಿಗೆ ಅನ್ವಯಿಸುವಂತೆ ವಾರ್ಷಿಕ ಆದಾಯ ಮಿತಿಯನ್ನು 6.2.2012ರ ಸರಕಾರದ ಆದೇಶದಲ್ಲಿ ರೂ. 2 ಲಕ್ಷಗಳಿಗೆ ನಿಗದಿಗೊಳಿಸಲಾಗಿದೆ. ತದನಂತರ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು (ಉಡಿoss ಚಿಟಿಟಿuಚಿಟ iಟಿಛಿome) ರೂ. 2 ಲಕ್ಷದಿಂದ ರೂ. 3.50 ಲಕ್ಷಗಳಿಗೆ ನಿಗದಿಗೊಳಿಸಿದೆ. 4.9.2013ರ ಆದೇಶದಲ್ಲಿ ಇದನ್ನು ರೂ. 3.50 ಲಕ್ಷದಿಂದ ರೂ. 4.50 ಲಕ್ಷಕ್ಕೆ ಮತ್ತು 4.6.2015ರ ಸರಕಾರದ ಆದೇಶದಂತೆ ರೂ. 4.50 ಲಕ್ಷದಿಂದ ರೂ. 6 ಲಕ್ಷಗಳಿಗೆ ಹೆಚ್ಚಿಸಿ ಆದೇಶಿಸಲಾಗಿತ್ತು.ಇದೀಗ 16.2.2018 ರಂದು ಆಗಿನ ಮುಖ್ಯಮಂತ್ರಿಗಳು ಮಂಡಿಸಿದ 2018-19ನೇ ಸಾಲಿಗೆ ಆಯವ್ಯಯ ಭಾಷಣದ ಕಂಡಿಕೆ-194ರಲ್ಲಿ ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿಯನ್ನು ರೂ. 6 ಲಕ್ಷದಿಂದ ರೂ. 8 ಲಕ್ಷಗಳಿಗೆ ಹೆಚ್ಚಿಸಲಾಗುವದು ಎಂದು ಘೋಷಿಸಿದ್ದರು. ಇದರಂತೆ 12.3.2018ರಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಈ ಬಗ್ಗೆ ಆದೇಶ ಹೊರಡಿಸುವಂತೆ ಸರಕಾರವನ್ನು ಕೋರಿದ್ದರು.
ಇದರಂತೆ ಇದೀಗ 14.9.2018ರಲ್ಲಿ ಸರಕಾರದಿಂದ ಆದೇಶ ಪ್ರಕಟಿಸಲಾಗಿದೆ. ಕೆನೆಪದರವನ್ನು ನಿರ್ಣಯಿಸಲು ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗಳಿಗೆ ಅನ್ವಯಿಸುವಂತೆ ಕೆನೆಪದರಕ್ಕೆ ನಿಗದಿಪಡಿಸಿರುವ ಅಭ್ಯರ್ಥಿಯ ಮತ್ತು ಅವರ ತಂದೆ-ತಾಯಿ ಅಥವಾ ಪೋಷಕರ ವಾರ್ಷಿಕ ಒಟ್ಟು ಆದಾಯ ಮಿತಿಯನ್ನು (ಉಡಿoss ಚಿಟಿಟಿuಚಿಟ iಟಿಛಿome) ರೂ. 6 ಲಕ್ಷಗಳಿಂದ ರೂ. 8 ಲಕ್ಷಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚಿಸಿ ಆದೇಶಿಸಿದೆ.
ಸರಕಾರದ ಆದೇಶ ಸಂಖ್ಯೆ ಸ.ಕ.ಇ. 225 ಬಿಸಿಎ 2000, ದಿ. 30.3.2002ರಲ್ಲಿರುವ ಇತರ ಷರತ್ತುಗಳಲ್ಲಿ ಯಾವದೇ ಬದಲಾವಣೆಗಳಿರುವದಿಲ್ಲ. ಈ ಆದೇಶವನ್ನು ಆರ್ಥಿಕ ಇಲಾಖೆ (ಟಿಪ್ಪಣಿ ಸಂಖ್ಯೆ ಆ.ಇ.441 ವೆಚ್ಚ-3/2018, ದಿ. 2.8.2018) ಮತ್ತು ಯೋಜನೆ ಇಲಾಖೆಯ (ಟಿಪ್ಪಣಿ ಸಂಖ್ಯೆ ಪಿಡಿ 16 ಐ.ಎಂ.ಎಂ.2018) ದಿನಾಂಕ 13.4.2018ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿ ಎಸ್.ಎನ್. ಕಲಾವತಿ ಅವರು ಸಂಬಂಧಿಸಿದ ಇತರ ಅಧಿಕಾರಿಗಳಿಗೆ ರವಾನಿಸಿರುವ ಪತ್ರದಲ್ಲಿ ಸೂಚಿಸಿದ್ದಾರೆ.