ಕೂಡಿಗೆ, ಸೆ. 16: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ವಿಶೇಷ ಆಹಾರ ಕಿಟ್ ಅನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ವಿತರಿಸಿದರು.
ನಂತರ ಮಾತನಾಡಿದ ಅವರು, ಕೊಡಗಿನಲ್ಲಿ ಆದ ಅತಿವೃಷ್ಟಿಯ ಹಿನ್ನೆಲೆ ಬಿಪಿಎಲ್ ಕಾರ್ಡ್‍ದಾರರಿಗೆ ವಿಶೇಷ ಆಹಾರ ಕಿಟ್ ಅನ್ನು ನೀಡಲಾಗುತ್ತಿದ್ದು, ಅದರಂತೆ ಕೂಡುಮಂಗಳೂರು, ಬಸವನತ್ತೂರು ಗ್ರಾಮಗಳ ಸುಮಾರು 970 ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲಾಗಿದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಸಾವಿತ್ರಿರಾಜ್, ಫಿಲೋಮಿನಾ, ಅಭಿವೃದ್ಧಿ ಅಧಿಕಾರಿ ಆಯೆಷಾ, ಕಾರ್ಯದರ್ಶಿ ಮುದ್ದಪ್ಪ ಇದ್ದರು.
ಕೂಡಿಗೆಯಲ್ಲಿಯೂ ವಿತರಣೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 180 ಬಿಪಿಎಲ್ ಕಾರ್ಡುದಾರರಿಗೆ ಆಹಾರ ಕಿಟ್ ಅನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ವಿತರಣೆ ಮಾಡಿದರು.
ಈ ಸಂದರ್ಭ ಸದಸ್ಯರಾದ ಕೆ.ಟಿ. ಈರಯ್ಯ, ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಕೆ.ಸಿ. ರವಿ ಇದ್ದರು.