ಭಾಗಮಂಡಲ, ಸೆ. 16: ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದ ಹೋಬಳಿ ವ್ಯಾಪ್ತಿಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಸಂಕಷ್ಟ್ಟಕ್ಕೆ ಸರ್ಕಾರ ಸಂದಿಸುತ್ತಿಲ್ಲ ಎಂದು ರೈತರು ಅವಲತ್ತುಗೊಂಡಿದ್ದಾರೆ.

ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರೈತರ ಕಾಫಿ, ಭತ್ತ, ಕಾಳುಮೆಣಸು ಮತ್ತಿತರ ಕೃಷಿ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾಗಮಂಡಲ, ಸೆ. 16: ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದ ಹೋಬಳಿ ವ್ಯಾಪ್ತಿಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಸಂಕಷ್ಟ್ಟಕ್ಕೆ ಸರ್ಕಾರ ಸಂದಿಸುತ್ತಿಲ್ಲ ಎಂದು ರೈತರು ಅವಲತ್ತುಗೊಂಡಿದ್ದಾರೆ.

ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರೈತರ ಕಾಫಿ, ಭತ್ತ, ಕಾಳುಮೆಣಸು ಮತ್ತಿತರ ಕೃಷಿ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆದ ರೈತರ ಬದುಕು ಕೊಚ್ಚಿ ಹೋಗಿದೆ. ಮಳೆಯಿಂದಾಗಿ ಬಹಳಷ್ಟು ಗದ್ದೆಗಳಲ್ಲಿ ಅಗೆ ನಾಶವಾಗಿದೆ. ಕೆಲವೆಡೆ ನಾಟಿ ಮಾಡಲಾಗಿದ್ದು, ಭತ್ತದ ಪೈರು ಹಸಿರು ಬಣ್ಣಕ್ಕೆ ತಿರುಗುವ ಅವಧಿಯಲ್ಲಿ ಮಳೆ ನೀರು ಸಂಗ್ರಹಗೊಂಡು ಪೈರುಗಳು ಕೊಳೆತು ಹೋಗಿವೆ. ಭತ್ತದ ಇಳುವರಿ ಕುಂಠಿತಗೊಂಡಿದೆ. ಊಟಕ್ಕೆ ಭತ್ತವೂ ಇಲ್ಲದೇ ಜಾನುವಾರುಗಳಿಗೆ ಮೇವೂ ಇಲ್ಲದೇ ಪರಿತಪಿಸುವಂತಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ರೈತರು ಎಕರೆಯೊಂದಕ್ಕೆ 20 ಚೀಲ ಕಾಫಿ ಬೆಳೆಯುತ್ತಿದ್ದರು. ಈ ವರ್ಷದ ಮಳೆಗೆ ಕಾಫಿ ಕೊಳೆತು ಉದುರಿ ಹೋಗಿದ್ದು ಕೊಳೆ ರೋಗದಿಂದಾಗಿ ಎಕರೆಗೆ ಎರಡು ಚೀಲ ಇಳುವರಿ ದೊರೆತರೆ ಅದೇ ಭಾಗ್ಯ ಎನ್ನುತ್ತಿದ್ದಾರೆ ರೈತರು. ತೋಟಕ್ಕೆ ಹಾಕಿದ ಗೊಬ್ಬರ ಮಳೆಯಿಂದ ಕೊಚ್ಚಿ ಹೋಗಿದ್ದು ಕಾಫಿ ತೋಟ ಯಥಾಸ್ಥಿತಿಗೆ ಬರಲು ಕನಿಷ್ಟ ಮೂರು ವರ್ಷ ಬೇಕಾಗಿದೆ. ಸರ್ಕಾರ ಕಾಫಿ ಬೆಳೆಗಾರರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಳುಮೆಣಸಿಗೆ ಹಾನಿ: ಬಿರುಸಿನ ಮಳೆಯಿಂದ ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿಗಳು ಹಾನಿಗೊಳಗಾಗಿವೆ. ಫಸಲು ಉದುರಿ ನಷ್ಟವಾಗಿರುವದಲ್ಲದೆ ಬಳ್ಳಿಗಳೇ ರೋಗಕ್ಕೆ ತುತ್ತಾಗಿವೆ. ಇತ್ತೀಚೆಗೆ ಬಿಸಿಲು ಕಾಣಿಸಿಕೊಂಡಿರುವದರಿಂದ ಬಳ್ಳಿಗಳು ದಿನದಿಂದ ದಿನಕ್ಕೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಉಪಬೆಳೆಯಾಗಿ ಬೆಳೆಯುತ್ತಿರುವ ಕಾಳುಮೆಣಸಿನ ಇಳುವರಿಯೂ ಇಲ್ಲದೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಪ್ರತಿವರ್ಷ 180-200 ಇಂಚು ಮಳೆಯಾಗುತ್ತದೆ. ಈ ವರ್ಷ 380 ಇಂಚು ಮಳೆ ದಾಖಲಾಗಿದ್ದರೂ ಕಂದಾಯ ಇಲಾಖೆ ಭಾಗಮಂಡಲ ವ್ಯಾಪ್ತಿಯನ್ನು ಸಂಕಷ್ಟಕ್ಕೆ ಒಳಗಾದ ಪ್ರದೇಶ ಎಂದು ಪರಿಗಣಿಸದಿರುವದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಲ್ಲಿ ಅಂಗಡಿಮುಂಗಟ್ಟುಗಳಲ್ಲಿ ವ್ಯಾಪಾರವೂ ಇಲ್ಲದೆ ಜನಜೀವನ ಸಂಕಷ್ಟದಲ್ಲಿದೆ. ಮಳೆಗಾಲದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗುವ ಭಾಗಮಂಡಲ ವ್ಯಾಪ್ತಿಯನ್ನು ಜಿಲ್ಲಾಡಳಿತ ಕಡೆಗಣಿಸಿರುವದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ವಾರ್ಡ್‍ಸಭೆ ಹಾಗೂ ಗ್ರಾಮಸಭೆಗಳಲ್ಲಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕಿಟ್ ನೀಡಲು ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ರಾಜುರೈ, ಪುರುಷೋತ್ತಮ, ಭಾಸ್ಕರ ಮತ್ತಿತರರು ತಿಳಿಸಿದ್ದಾರೆ.

- ಕುಯ್ಯಮುಡಿ ಸುನಿಲ್