ಗೋಣಿಕೊಪ್ಪ ವರದಿ, ಸೆ. 16: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಭೂಕುಸಿತಕ್ಕೆ ಒಳಗಾದ ಸಂತ್ರಸ್ತರಿಗೆ ನೆರವಾಗುವಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಧನ ಸಹಾಯ ಚೆಕ್‍ನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ಓಣಂ ಪ್ರಯುಕ್ತ ಸಂಗ್ರಹಿಸಿದ್ದ ಹಣದಲ್ಲಿ ಸಾರ್ವಜನಿಕ ಓಣಂ ಆಚರಣೆ ಮಾಡದ ಕಾರಣ ರೂ. 60 ಸಾವಿರವನ್ನು ಪರಿಹಾರ ನಿಧಿಗೆ ಕೊಡಗು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್ ಅವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಜಯಶ್ರೀ, ಕಾರ್ಯದರ್ಶಿ ರೀನಾ ಉಮೇಶ್, ಜಂಟಿ ಕಾರ್ಯದರ್ಶಿ ಶ್ರೀಜಾ ಪ್ರದೀಪ್, ನಿರ್ದೇಶಕರುಗಳಾದ ಬಿಂದು ವಿಜಯನ್, ಬಬಿತಾ ಅಚ್ಚುತ್ತನ್, ಪುಷ್ಪಾ ಮನೋಜ್, ಪದ್ಮ ಪ್ರಮೇಶ್, ಬಿಂದು ಸಾಜಿ, ಶ್ರೀಮಂಗಲ ಉಪಸಮಿತಿ ಅಧ್ಯಕ್ಷ ಮುರಳಿ ಉಪಸ್ಥಿತರಿದ್ದರು. - ಸುದ್ದಿಪುತ್ರ