ಕೂಡಿಗೆ, ಸೆ. 16: ಕೂಡಿಗೆ ಗ್ರಾಮದ ನಿವಾಸಿ ಹೃದಯಾಘಾತ ದಿಂದ ಸಾವನ್ನಪ್ಪಿದ್ದ ಕೆ.ಕೆ. ತಿಮ್ಮಪ್ಪ ಎಂಬವರ ಶವ ಸಂಸ್ಕಾರ ನಡೆಸಲು ಜಾಗ ಇಲ್ಲ. ಅಲ್ಲದೆ ಸ್ಮಶಾನ ಜಾಗವನ್ನು ಬ್ಯಾಡಗೊಟದಲ್ಲಿ ಗುರುತು ಮಾಡಿರುವದರಿಂದ ಕೂಡಿಗೆಯಿಂದ ಅಲ್ಲಿವರೆಗೆ ತೆರಳಲು ಸಾಧ್ಯ ವಾಗುವದಿಲ್ಲ. ಆದ್ದರಿಂದ ಗ್ರಾಮದಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಮಾಡಬೇಕೆಂದು ಪಂಚಾಯಿತಿ ಎದುರು ತಿಮ್ಮಪ್ಪ ಅವರ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಿರೀಶ್, ಪ್ರತಿಭಟನಾಕಾರೊಂದಿಗೆ ಮಾತುಕತೆ ನೆಡೆಸಿ, ಮುಂದಿನ ಮಾಸಿಕ ಸಭೆಯಲ್ಲಿ ಚರ್ಚಿಸಿ, ಜಾಗವನ್ನು ಗುರುತು ಮಾಡಲಾಗುವದು ಎಂದು ತಿಳಿಸಿದ್ದರು. ನಂತರ ಗಾಮಸ್ಥರು ಹೊಳೆ ಬಳಿಯಲ್ಲಿ ಶವ ಸಂಸ್ಕಾರ ನೆರವೇರಿಸಿದರು.
ಪ್ರತಿಭಟನೆಯಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ, ಮಾಜಿ ಅಧ್ಯಕ್ಷರು, ಯುವಕ ಸಂಘದ ಪ್ರಮುಖರು ಇದ್ದರು. ಸ್ಥಳದಲ್ಲಿ ಪೊಲೀಸರು ಹಾಗೂ ಕೂಡಿಗೆ ವಿಭಾಗ ಗ್ರಾಮ ಲೆಕ್ಕಾಧಿಕಾರಿ ಇದ್ದರು.