ಸಿದ್ದಾಪುರ, ಸೆ. 16: ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವೃದ್ಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗೋಣಿಕೊಪ್ಪಲು ದೇವರಪುರದ ನಿವಾಸಿಯಾಗಿದ್ದ ಮುರುಗನ್ (75) ಎಂಬಾತ ಕಳೆದ 9 ವರ್ಷಗಳ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಕಾವಲು ಗಾರನಾಗಿ ಕೆಲಸ ಮಾಡಿಕೊಂಡಿದ್ದ ವೇಳೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ. ಈತ ಕೊಲೆ ಪ್ರಕರಣದಲ್ಲಿ ಮೊದಲ ಪುಟದಿಂದ) 9 ವರ್ಷಗಳ ಕಾಲ ಬೆಳಗಾಂ ಜೈಲಿನಲ್ಲಿದ್ದು, 3.9.2018ರಂದು ಕಾರಾಗೃಹದಿಂದ ಬಿಡುಗಡೆ ಆಗಿದ್ದ. ಈ ಸಂದರ್ಭ ನ್ಯಾಯಾಲಯವು ಆರೋಪಿ ಮುರುಗನ್‍ಗೆ ತಾ. 15ರಂದು ಬಾಂಡ್ ಮುಚ್ಚಳಿಕೆಯನ್ನು ನೀಡುವಂತೆ ಷರತ್ತು ವಿಧಿಸಿತ್ತು ಎನ್ನಲಾಗಿದೆ. ಇದರಿಂದ ಆತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈತ ತನ್ನ ಮಗ ನೆಲ್ಯಹುದಿಕೇರಿಯ ಬರಡಿ ಗ್ರಾಮದ ರಾಜೇಂದ್ರ ಎಂಬವರ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. ಈ ಬಗ್ಗೆ ರಾಜೇಂದ್ರ ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.