ವೀರಾಜಪೇಟೆ, ಸೆ. 15: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿದ್ದ ಸರಸ್ವತಿ ಇಲೆಕ್ಟ್ರಾನಿಕ್ಸ್ ಹಾಗೂ ಪಕ್ಕದ ವಿಮಲ್ ಹಾರ್ಡ್‍ವೇರ್‍ನ ಎರಡು ಅಂಗಡಿಗಳು ನಿನ್ನೆ ದಿನ ಬೆಳಗಿನ ಜಾವ 4 ಗಂಟೆಯ ಸಮಯದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿ ಭಸ್ಮಗೊಂಡಿದಲ್ಲದೆ ಪಕ್ಕದ ಗೋಡೌನ್ನಲ್ಲಿದ್ದ ರೆಡಿಮೇಡ್ ಬಟ್ಟೆಗಳ ದಾಸ್ತಾನಿಗೂ ಬೆಂಕಿ ತಗುಲಿ ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ.

ಕೊಡಗು ಜಿಲ್ಲಾ ಉಪಾಧ್ಯಾಯರ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣದಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿ ಮಳಿಗೆಗೆ ಮೊದಲು ವಿದ್ಯುತ್ ಶಾರ್ಟ್ ಸಕ್ಯೂರ್ಟ್‍ನಿಂದ ಬೆಂಕಿ ಹಿಡಿದಿದೆ. ಬೆಂಕಿ ಅಂಗಡಿ ಸುತ್ತ ಆವರಿಸಿದ್ದರಿಂದ ಅಂಗಡಿಯಲ್ಲಿ ರಿಪೇರಿಗಾಗಿ ಬಂದಿದ್ದ ಟಿ.ವಿಗಳು ಮುದ್ರಣಗೊಂಡು ಡೆಲಿವರಿಗೆ ಸಿದ್ದವಾಗಿದ್ದ ಸುಮಾರು ಒಂದೂವರೆ ಲಕ್ಷ ರೂಗಳಿಗೂ ಅಧಿಕ ಮೊತ್ತದ ಪುಸ್ತಕಗಳು ಸೇರಿದಂತೆ ಇತರ ಸಾಮಗ್ರಿಗಳು ಭಸ್ಮಗೊಂಡಿವೆ. ಇಲೆಕ್ಟ್ರಾನಿಕ್ಸ್ ಅಂಗಡಿಯ ಬೆಂಕಿ ಸುಮಾರು ಆರು ಅಡಿ ದೂರದಲ್ಲಿರುವ ವಿಮಲ್ ಹಾರ್ಡ್‍ವೇರ್ ಅಂಗಡಿಗೂ ತಗುಲಿ ಅಲ್ಲ್ಲಿದ್ದ ಸಾಮಗ್ರಿಗಳು ಪೈವುಡ್‍ಶೀಟ್‍ಗಳು ಬೆಂಕಿಗೆ ಮುದ್ರಣಗೊಂಡು ಡೆಲಿವರಿಗೆ ಸಿದ್ದವಾಗಿದ್ದ ಸುಮಾರು ಒಂದೂವರೆ ಲಕ್ಷ ರೂಗಳಿಗೂ ಅಧಿಕ ಮೊತ್ತದ ಪುಸ್ತಕಗಳು ಸೇರಿದಂತೆ ಇತರ ಸಾಮಗ್ರಿಗಳು ಭಸ್ಮಗೊಂಡಿವೆ.