ಮಡಿಕೇರಿ, ಸೆ. 15: ಹಿಜರಿ ದಿನದರ್ಶಿಯ ಪ್ರಕಾರ ಇಸ್ಲಾಮಿಕ್ ಹೊಸ ವರ್ಷ ತಾ. 11 ರಂದು ಮೊಹರ್ರಂ ತಿಂಗಳು ಆರಂಭಗೊಂಡಿದೆ.

ತಾ. 20 ರಂದು ಮೊಹರ್ರಂ ಹತ್ತರಂದು ಆಶೂರ ವಿಶೇಷ ದಿನವಾಗಿರುತ್ತದೆ ಎಂದು ಕೊಡಗು ಜಿಲ್ಲಾ ಖಾಝಿಯ ಕಚೇರಿ ಪ್ರಕಟಣೆ ತಿಳಿಸಿದೆ. ಇದೀಗ ಹಿಜರಿ 1440ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮೊಹರ್ರಂ ಎಂಬದು ವರ್ಷದ ಆರಂಭದ ತಿಂಗಳಾಗಿದೆ.