ಮಡಿಕೇರಿ, ಸೆ. 15: ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳಲ್ಲಿ ಇತ್ತೀಚಿಗೆ ಪಕೃತಿ ವಿಕೋಪದಿಂದ ಗೋವುಗಳು ಮತ್ತು ಭಕ್ತಜನರಿಗೆ ಸಂಕಷ್ಟ ಒದಗಿದ ಸಂದರ್ಭ ಜಗದ್ಗುರು ಶಂಕರಾ ಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಮಾರ್ಗದರ್ಶನ ಪಡೆದು ಸನ್ನಿಧಿಯಲ್ಲಿ ಹವ್ಯಕ ಮಹಾ ಮಂಡಲ, ಶ್ರೀಮಠದ ಕಾಮದುಘಾ ವಿಭಾಗ ಹಾಗೂ ಶ್ರೀಅಖಿಲಹವ್ಯಕ ಮಹಾಸಭಾ ವತಿಯಿಂದ ಗೋವು ಹಾಗೂ ಜನರ ಸಂಕಷ್ಟ ಪರಿಹಾರಕ್ಕೆ ಹರಕೆ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ ಎಂದು ಶ್ರೀರಾಮಚಂದ್ರಾಪುರಮಠ ಹವ್ಯಕಮಹಾಮಂಡಲದ ಅಧ್ಯಕ್ಷರಾದ ಈಶ್ವರೀಶ್ಯಾಂ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. 18 ರಂದು ಹರಕೆ ಸಮರ್ಪಣೆ ನಡೆಯಲಿದೆ ಎಂದಿದ್ದಾರೆ. ಆ ದಿನÀದಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠವಾದ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಹರಕೆ ಸಮರ್ಪಣೆ ನಡೆಯಲಿದೆ. ಶ್ರೀಕರಾರ್ಚಿತದೇವರಿಗೆ ಸಮಗ್ರ ಪೂಜಾ ಸೇವೆ, ಶ್ರೀಮಹಾಗಣಪತಿ ಹವನ, ಶ್ರೀರಾಮ ತಾರಕ ಹವನ, ಶ್ರೀಲಲಿತಾ ಹವನ, ಲಕ್ಷ ಕುಂಕುಮಾರ್ಚನೆ ಸೇವೆಗಳನ್ನುÀ ನಿಶ್ಚಯಿಸಿದೆ.
ಸರ್ವಶಿಷ್ಯರ ತೊಡಗಿಸುವಿಕೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.