ಕುಶಾಲನಗರ, ಸೆ. 15: ಪಂಚಾಯ್ತಿ ಮೂಲಕ ಕುಶಾಲನಗರ ಕಾರ್ಡ್‍ದಾರರಿಗೆ ಕಿಟ್ ವಿತರಣೆಯಲ್ಲಿ ವಿಳಂಬವಾದ ಹಿನ್ನೆಲೆಯಲಿ ಕೆಲವು ನಾಗರಿಕರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಪ್ರಕೃತಿ ವಿಕೋಪದ ಹಿನ್ನೆಲೆ ಸರಕಾರದ ಸೂಚನೆಯಂತೆ ಕಳೆದ ಕೆಲವು ದಿನಗಳಿಂದ ಕುಶಾಲನಗರ ಪ.ಪಂ. ಕಚೇರಿ ಬಳಿ ವಿತರಣಾ ಕಾರ್ಯ ನಡೆದಿತ್ತು. ಆದರೆ ಕೆಲವು ಫಲಾನುಭವಿಗಳಿಗೆ ವಿತರಣೆ ವಿಳಂಬ ಹಿನ್ನೆಲೆ ಪಂಚಾಯಿತಿ ಕಚೇರಿ ಆವರಣದಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು.

ಅಸಮರ್ಪಕವಾಗಿ ಕಿಟ್ ವಿತರಣೆ ನಡೆಯುತ್ತಿದ್ದೆ ಎಂದು 4ನೇ ಬ್ಲಾಕ್ ನಿವಾಸಿ ಜೋಸೆಫ್ ಮತ್ತಿತರರು ಆರೋಪಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ತಿಳಿಸಿದ್ದಾರೆ. ಸಂಜೆ ವೇಳೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿತರಣೆ ಮಾಡಲು ಕ್ರಮಕೈಗೊಂಡ ದೃಶ್ಯವೂ ಕಂಡುಬಂತು.