ಕೂಡಿಗೆ: ಕೂಡಿಗೆ ಗಣಪತಿ ಸೇವಾ ಸಮಿತಿ, ಯಂಗ್ ಸ್ಟಾರ್ ಅಸೋಸಿಯೇಷನ್ ವತಿಯಿಂದ ಗಣಪತಿ ಪೆಂಡಾಲ್ ಗಣಪತಿ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಅದೇ ದಿನ ಸಂಜೆ ವಿದ್ಯುತ್ ಅಲಂಕೃತ ಟ್ರ್ಯಾಕ್ಟರ್‍ನಲ್ಲಿ ಗಣಪತಿ ಮೂರ್ತಿಯನ್ನು ಕುಳ್ಳಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷ ಪ್ರವೀಣ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರುಗಳು ಹಾಜರಿದ್ದರು.

ಕೂಡುಮಂಗಳೂರು: ಕೂಡುಮಂಗಳೂರು ಗ್ರಾಮದ ವ್ಯಾಪ್ತಿಯಲ್ಲಿ ವಿವಿಧ ಸಂಘಟನೆಗಳು. ಸರಳವಾಗಿ ಗಣಪತಿ ಮೂರ್ತಿಯನ್ನು ಆಯಾಯಾ ಗ್ರಾಮಗಳಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೂಡಿಗೆ ಡೈರಿ: ಕೂಡಿಗೆ ಡೈರಿ ನೌಕರರ ವತಿಯಿಂದ ವರ್ಷಂಪ್ರತಿಯಂತೆ ಈ ಬಾರಿಯೂ ಡೈರಿ ಅವರಣದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಯಿತು.

ಕೂಡಿಗೆ ಕೃಷಿ ಇಲಾಖೆಯ ಫಾರಂನಲ್ಲಿರುವ ಮೊರಾರ್ಜಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಾಲಾ ಶಿಕ್ಷಕರ ವೃಂದ ಸೇರಿದಂತೆ ಶಾಲಾ ಅಡಳಿತ ವರ್ಗ ಒಗ್ಗೂಡಿ ಶಾಲಾ ಆವರಣದಲ್ಲಿ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು.ಗುಡ್ಡೆಹೊಸೂರು: ಸಮೀಪದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ (ಎನ್.ಟಿ.ಸಿ) ವತಿಯಿಂದ ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ವನ್ನು ಆಚರಿಸಲಾಯಿತು. ಸರ್ವ ಧರ್ಮದವರು ಸೇರಿ ಉತ್ಸವ ಮೂರ್ತಿ ಗಣಪತಿಯನ್ನು ಪ್ರತಿಷ್ಠ್ಠಾಪಿಸಿ ಪೂಜಿಸುತ್ತಿರುವದು ಒಂದು ವಿಶೇಷವಾಗಿದೆ. ಇಲ್ಲಿನ ಎಲ್ಲಾ ಧರ್ಮದ ವರ್ತಕರು ಸೇರಿ ಗಣೇಶೋತ್ಸವವನ್ನು ಆಚರಿಸಿ ಸಮಾಜಕ್ಕೆ ಶಾಂತಿ, ಸೌಹಾರ್ಧ, ಸಮಾನತೆ, ಸೋದರತ್ವ ಸಾರುವ ಸಂದೇಶವನ್ನು ನೀಡಿದಂತಾಗಿದೆ. ಒಂದೆಡೆ ಪ್ರಕೃತಿ ವಿಕೋಪದಿಂದಾಗಿ ಪ್ರವಾಸಿಗರು ಬರದೆ ವರ್ತಕರು ತಮ್ಮ ಅಂಗಡಿಗಳನ್ನು ತೆರೆದು ಸಂಕಸ್ಟದಲ್ಲಿದ್ದರು ಅಲ್ಲಿನ ವರ್ತಕರು ಸೇರಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಿದರು.

ಈ ಸಂದರ್ಭ ಎನ್.ಟಿ.ಸಿ.ಯ ಸ್ಥಾಪಕ ಅಧ್ಯಕ್ಷ ಅಬ್ದಲ್ ಸಲಾಂ, ಲೊಕೇಶ್, ರಮೇಶ್, ವಿನೀಶ್, ಜಾನ್, ತಫಾನ್, ಸರೀಯಾ, ಸಲಿಂ, ಕೆ.ಪಿ. ನಾಣಯ್ಯ, ಲಲಿತಾ ಮುಂತಾದವರು ಹಾಜರಿದ್ದರು. 2ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು. ಇದು ಸರ್ವಧರ್ಮ ಗಣೇಶೋತ್ಸವವಾಗಿದೆ. 5 ದಿನಗಳ ಕಾಲ ಪೂಜಿಸಿ ನಂತರ ಅಲ್ಲಿನ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗುವದು ಎಂದು ಎನ್.ಟಿ.ಸಿ. ಅಧ್ಯಕ್ಷ ಅಬ್ದಲ್ ಸಲಿಂ ತಿಳಿಸಿದ್ದಾರೆ.ನಾಪೆÉÇೀಕ್ಲು: ನಾಪೆÇೀಕ್ಲು ಪಟ್ಟಣದಲ್ಲಿ 5 ಗಣಪತಿ ಸೇವಾ ಸಮಿತಿಗಳ ವತಿಯಿಂದ ವರ್ಷಂಪ್ರತಿ ಒಂದು ವಾರಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಿಂದ ಗಣೇಶ ಮೂರ್ತಿಗಳ ವಿಸರ್ಜನೋತ್ಸವವನ್ನು ನಡೆಸಲಾಗುತ್ತಿತ್ತು. ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರ ಸೇರುತ್ತಿದ್ದರು. ಆದರೆ ಈ ಬಾರಿ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದ ಹಿನ್ನೆಲೆ ಎಲ್ಲಾ ಗಣೇಶ ಸೇವಾ ಸಮಿತಿಯವರು ಚೌತಿಯ ದಿನದಂದು ಬೆಳಿಗ್ಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಜೆ ಯಾವದೇ ಆಡಂಬರವಿಲ್ಲದೆ ಮೂರ್ತಿಗಳನ್ನು ಸಮೀಪದ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.ಸುಂಟಿಕೊಪ್ಪ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ 54ನೇ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಗುರುವಾರ ಬೆಳಿಗ್ಗೆ ಇಲ್ಲಿನ ರಾಮಂದಿರದಲ್ಲಿ ಬೆಳಿಗ್ಗೆ 10.15ಕ್ಕೆ ಪ್ರತಿಷ್ಠಾಪಿಸಲಾಯಿತು. ಮಹಿಳಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಸಿದರು. ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ 7 ಗಂಟೆಗೆ 108 ತೆಂಗಿನಕಾಯಿಯ ಮೂಡಪ್ಪ ಸೇವೆ ನಡೆದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಪೂಜಾ ವಿಧಿವಿಧಾನಗಳನ್ನು ಹಿರಿಯ ಅರ್ಚಕ ಗಣೇಶ ಶರ್ಮಾ, ಮಂಜುನಾಥ್ ಭಟ್, ದರ್ಶನ್ ಭಟ್ ನೆರವೇರಿಸಿದರು. ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್, ಉಪಾಧ್ಯಕ್ಷ ರಂಜಿತ್ ಪೂಜಾರಿ, ಲೋಕೇಶ್, ಕಾರ್ಯದರ್ಶಿ ಡಿ.ಎಂ. ಲಕ್ಷ್ಮಣ್, ಖಜಾಂಚಿ ಅಣ್ಣುಶೇಖರ್, ಶಾಂತರಾಮ ಕಾಮತ್, ಧನು ಕಾವೇರಪ್ಪ, ಪಿ.ಆರ್. ಸುನಿಲ್ ಕುಮಾರ್, ರಜನೀಶ್ ಇತರರು ಇದ್ದರು.

ಗುಡ್ಡೆಹೊಸೂರು: ಇಲ್ಲಿನ ಸಮುದಾಯಭವನದಲ್ಲಿ 24ನೇ ವರ್ಷದ ಗಣೇಶೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಪ್ರಕೃತಿಯಿಂದ ಯಾವದೇ ಅನಾಹುತಗಳು ನಡೆಯದಿರಲಿ ಎಂದು ಗಣಪತಿಯಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭ ಅರ್ಚಕ ರಾಜಪ್ಪ ಮತ್ತು ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಜರಿದ್ದು ಪ್ರಸಾದ ಸ್ವೀಕರಿಸಿದರು.