ಗೋಣಿಕೊಪ್ಪ ವರದಿ, ಸೆ. 15: ನ್ಯಾಷನಲ್ ರೈಫಲ್ ಅಸೋಸಿಯೇಷನ್ ಹಾಗೂ ತಮಿಳುನಾಡು ಶೂಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಚೆನೈನಲ್ಲಿ ನಡೆದ ಜಿ.ವಿ. ಮಾಲವಂಕರ್ ಪ್ರೀ ನ್ಯಾಷನಲ್ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಗೋಣಿಕೊಪ್ಪ ಅಶ್ವಿನಿ ಫೌಂಡೇಶನ್‍ನ 6 ಕ್ರೀಡಾಪಟುಗಳು ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತರಾನಾ ರಮೇಶ್ ಯೂತ್ ಕೆಟಗೇರಿಯಲ್ಲಿ 400 ಕ್ಕೆ 380 ಅಂಕಗಳ ಮೂಲಕ 5ನೇ ಸ್ಥಾನ ಪಡೆದರು. ಕಿರಿಯರ ವಿಭಾಗದಲ್ಲಿ 6ನೇ ಸ್ಥಾನ ಗಿಟ್ಟಿಕೊಂಡರು. ಯೂತ್ ವಿಭಾಗದಲ್ಲಿ ಸೋನಿಕಾ ಮಹೇಶ್ (381 ಅಂಕ), ಅದ್ವಿಕಾ ನಯನಾ (378 ಅಂಕ), ವಿತನ್ ಬೆಳ್ಯಪ್ಪ (377 ಅಂಕ), ಭೀಯಾ ಅಮಿತ್ ಪಾಟಿಲ್ (371 ಅಂಕ), ಜಸ್ಟಿನ್ ಆಂಥೋನಿ ಜೋಸ್ (367) ಇವರುಗಳು ಜಯ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು. ಪುನೀತ್‍ಕುಮಾರ್ ತರಬೇತು ದಾರರಾಗಿ ಭಾಗವಹಿಸಿದ್ದರು. - ಸುದ್ದಿಪುತ್ರ