ಶ್ರೀಮಂಗಲ, ಸೆ. 14: ಬೆಂಗಳೂರಿನ ಪಿ.ಇ.ಎಸ್. ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಉತ್ತಮ ರ್ಯಾಂಕ್‍ನೊಂದಿಗೆ ತೇರ್ಗಡೆಯಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಶ್ರೀಮಂಗಲ ಸಮೀಪದ ಬೀರುಗ ಗ್ರಾಮದ ಅಜ್ಜಮಾಡ ಚಿಮ್ಮ ತಿಮ್ಮಯ್ಯ ಹಾಗೂ ಡೇಝ ದಂಪತಿಯ ಪುತ್ರ ಎ.ಟಿ. ಚೆಂಗಪ್ಪ ಸಿವಿಲ್ ಇಂಜಿನಿಯರಿಂಗ್ ಪದವಿಯಲ್ಲಿ ನಾಲ್ಕನೇ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕೊಡಗು ಮೂಲದ ಕಡೇಮಾಡ ಮೊಣ್ಣಪ್ಪ ಹಾಗೂ ಸುಮನ್ ದಂಪತಿಯ ಪುತ್ರಿ ದೀಕ್ಷಿತ್ ಮೊಣ್ಣಪ್ಪ ಎಂ.ಬಿ.ಎ ಪದವಿಯಲ್ಲಿ ಐದನೇ ರ್ಯಾಂಕ್ ಹಾಗೂ ಕರ್ತಮಾಡ ಸೋಮಯ್ಯ ಹಾಗೂ ಪಟ್ಟು ಸೋಮಯ್ಯ ದಂಪತಿಯ ಪುತ್ರಿ ಬಯೋಟೆಕ್ನಾಲಜಿಯಲ್ಲಿ ಐದನೇ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ 100 ಫೀಟ್ ರಸ್ತೆಯಲ್ಲಿರುವ ಪಿ.ಇ.ಎಸ್. ಯೂನಿವರ್ಸಿಟಿ ಸಭಾಂಗಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಇನ್‍ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಸುಧಾ ಮೂರ್ತಿ ಪದಕ ಹಾಗೂ ಪದವಿ ಪ್ರಮಾಣ ಪತ್ರ ಪ್ರಧಾನ ಮಾಡಿದರು.