ಕುಶಾಲನಗರ, ಸೆ. 10: ಕುಶಾಲನಗರ ಕೊಡವ ಸಮಾಜದ ವತಿಯಿಂದ ಕಾಲೂರು ಗ್ರಾಮದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳು ಸೇರಿದಂತೆ ದಿನ ಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.
ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ನೇತೃತ್ವದ ತಂಡ ಕಾಲೂರು ಗ್ರಾಮಕ್ಕೆ ತೆರಳಿ ಭೂಕುಸಿತದಿಂದ ಸಂತ್ರಸ್ಥರಾದ 50 ಕ್ಕೂ ಅಧಿಕ ಮಂದಿಗೆ ದಾನಿಗಳಿಂದ ಸಂಗ್ರಹಿಸಿದ ಅಕ್ಕಿ, ಕಂಬಳಿ, ಬೆಡ್‍ಶೀಟ್, ಸೀರೆ, ಪಂಚೆ, ಹಾಲಿನಪುಡಿ, ಬಕೆಟ್ ಮತ್ತಿತರ ಅಗತ್ಯ ವಸ್ತುಗಳನ್ನು ಕಿಟ್ ವಿತರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಅಯಿಲಪಂಡ ಮಂದಣ್ಣ, ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ನಿರ್ದೇಶಕರುಗಳಾದ ಸೋಮೆಯಂಡ ಉದಯ, ಚೌರೀರ ತಿಮ್ಮಯ್ಯ, ಮುಂಡಂಡ ದಯಾನಂದ, ಅಂಜಪರವಂಡ ಭೋಜಣ್ಣ, ಅಯಿಲಪಂಡ ಸುನಿಲ್ ಮತ್ತಿತರರು ಇದ್ದರು.