ಮಡಿಕೇರಿ, ಸೆ. 9: ಕೊಡಗು ಗೌಡ ಯುವ ವೇದಿಕೆ ವತಿಯಿಂದ ತಾ. 30 ರಂದು ನಡೆಯಬೇಕಿದ್ದ ಕೈಲು ಮುಹೂರ್ತ ಸಂತೋಷಕೂಟವನ್ನು ರದ್ದು ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದ ಪರಿಣಾಮ ಜಿಲ್ಲೆಯ ಜನತೆ ಕಂಗಾಲಾಗಿರುವದರಿಂದ ಈ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಕ್ರಿಕೆಟ್ ಪಂದ್ಯಾಟ-ಡಿಸೆಂಬರ್‍ನಲ್ಲಿ ಸಭೆ

ಗೌಡ ಕುಟುಂಬಗಳ ನಡುವಿನ ಕುಟುಂಬವಾರು ಕ್ರಿಕೆಟ್ ಪಂದ್ಯಾಟ ನಡೆಸುವ ಬಗ್ಗೆ ಡಿಸೆಂಬರ್‍ನಲ್ಲಿ ಸಭೆ ಕರೆದು ತೀರ್ಮಾನವನ್ನು ಕೈಗೊಳ್ಳಲಾಗುವದು ಎಂದು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ತಿಳಿಸಿದ್ದಾರೆ.