* ಸಿದ್ದಾಪುರ, ಆ. 9: ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ವಿತರಿಸಲಾಗುವ ಕಿಟ್ ಇನ್ನೂ ಪೂರೈಕೆ ಆಗದ ಕಾರಣ ಸಂತ್ರಸ್ತರಿಗೆ ವಿತರಿಸಲು ವಿಳಂಬವಾಗುತಿದೆ ಎಂದು ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯ್ತಿ ಸದಸ್ಯರು ಆರೋಪಿಸಿದ್ದಾರೆ.
ಸರ್ಕಾರದ ವತಿಯಿಂದ ನೆರೆ ಪೀಡಿತ ಪ್ರದೇಶಗಳಿಗೆ ಹಾಗೂ ಸಂತ್ರಸ್ತರಿಗೆ ವಿತರಿಸಲಾಗುವ ಕಿಟ್ ಅಭ್ಯತ್‍ಮಂಗಲ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಸರಬರಾಜು ಆಗಿರುವದಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆ ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದು ಕೊಂಡವರು ಅಭ್ಯತ್‍ಮಂಗಲ ದಲ್ಲಿಯೂ ವಾಸವಿದ್ದಾರೆ. ಆದರೆ ಗ್ರಾಮವನ್ನು ಕಡೆಗಣಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸದಸ್ಯರಾದ ಅಂಚೆಮನೆ ಸುಧಿ , ಸತೀಶ್, ಯಶೋದ, ನಳಿನಿ ಆರೋಪಿಸಿದ್ದಾರೆ.