ಮಡಿಕೇರಿ, ಸೆ. 8: ಭಾರತೀಯ ಸೇನೆಯಲ್ಲಿ ಕೊಡಗು ಜಿಲ್ಲೆಯ ಓರ್ವ ಯುವತಿಯೂ ಸೇರಿದಂತೆ ಒಟ್ಟು ಮೂರು ಮಂದಿ ಕಮೀಷನ್ಡ್ ಪಡೆದಿದ್ದು, ಈ ಮೂವರು ಲೆಫ್ಟಿನೆಂಟ್ ಅಧಿಕಾರಿಗಳಾಗಿ ನಿಯುಕ್ತಿಗೊಳ್ಳುವ ಮೂಲಕ ಸೇನಾ ಜಿಲ್ಲೆ ಖ್ಯಾತಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.
ಮೇಕೇರಿರ ಸೋನಾ ದೇಚಮ್ಮ, ಆಪಾಡಂಡ ರಜತ್ ತಮ್ಮಯ್ಯ ಹಾಗೂ ನೆರವಂಡ ಬೋಪಯ್ಯ ಅವರುಗಳು ಇಂದು ಚೆನ್ನೈಯಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ನಲ್ಲಿ ಲೆಫ್ಟಿನೆಂಟ್ ಅಧಿಕಾರಿ ಹುದ್ದೆಯನ್ನು ಅಲಂಕರಿಸಿದರು.
ಸೋನಾ ರೋಹಿಣಿ (ತಾಮನೆ-ಬಲ್ಲಚಂಡ) ಅವರ ಪುತ್ರಿ. ರಜತ್ ತಮ್ಮಯ್ಯ ಆಪಾಡಂಡ ತಮ್ಮಯ್ಯ ಹಾಗೂ ಉಷಾ (ತಾಮನೆ ಕೀತಿಯಂಡ) ಹಾಗೂ ಬೋಪಯ್ಯ ನೆರವಂಡ ಸುರೇಶ್ ಹಾಗೂ ದೇಚಮ್ಮ (ತಾಮನೆ ಮೇಕತಂಡ) ದಂಪತಿಯ ಪುತ್ರರಾಗಿದ್ದಾರೆ.