ಏನಾಗಿದೆ ಈ ಕಾವೇರಮ್ಮಳ ಈ ನಾಡಿನಲ್ಲಿ ಈ ಪ್ರಶ್ನೆ ಮುಂದಿಟ್ಟವರು ಹೆಬ್ಬಟ್ಟಗೇರಿ-ಕರ್ಣಂಗೇರಿಯ ಬೆಳೆಗಾರ, ಮಡಿಕೇರಿಯ ನಿವಾಸಿ ಕೊಕ್ಕಲೇರ ಕಾರ್ಯಪ್ಪ ಅವರು. ತಮ್ಮ ಗ್ರಾಮದಲ್ಲಿ ದುರ್ಘಟನೆ ಬಳಿಕವೂ ತಾನು ಜೀಪಿನಲ್ಲಿ ತೋಟಕ್ಕೆ ತೆರಳುತ್ತಿರುವದಾಗಿ ತಿಳಿಸಿದ ಅವರು, ತಾ. 16 ರ ಪ್ರವಾಹ-ಭೂ ಕುಸಿತದಲ್ಲಿ ಕಷ್ಟ-ನಷ್ಟ ಸಂಭವಿಸಿದೆ. ಆದರೆ, ಕಾವೇರಮ್ಮಳ ಕೃಪೆಯೋ ಏನೋ ಅನೇಕ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೆನಪಿಸಿ ಆಕೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಪ್ಪ ಅವರ ಅನುಭವದ ಪ್ರಕಾರ ಭೂ ಪದರದಲ್ಲಿ ಜಲಸ್ಫೋಟಕ್ಕೂ ಮುನ್ನ ಭಾರೀ ಶಬ್ದವುಂಟಾಯಿತು. ಗುಡ್ಡ ಕುಸಿಯುವ ಮುನ್ನ ಶಬ್ದ ಏಕೆ ಉಂಟಾಯಿತು? ಅದೂ ಅಲ್ಲದೆ ಕುಸಿತ ಕೆಳ ಭಾಗಕ್ಕೆÉ ಮಣ್ಣ್ಣನ್ನು ಸರಿಸುವ ಬದಲು ನೇರವಾಗಿ ಬಹು ದೂರಕ್ಕೆ ಎಸೆಯುತ್ತದೆ. ಭಾರೀ ಸ್ಫೋಟಗೊಂಡು ಮಣ್ಣಿನ ಪದರ ಹೊರ ಬಂದು ಕೆಸರು ಆವರಿಸುತ್ತದೆ. ಇದಕ್ಕೆ ಕಾರಣವೇನು? ನಿಜಕ್ಕೂ ಹಳ್ಳಿಯ ಅಮಾಯಕ ಜನರು ಪ್ರತ್ಯಕ್ಷವಾಗಿ ಈ ಘಟನೆಯನ್ನು ವೀಕ್ಷಿಸಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಗುಡ್ಡ ಕುಸಿದಾಗ ಮಣ್ಣು ಎಸೆಯಲ್ಟಟ್ಟು ದರಿಂದ ಈ ಭಾರೀ ಅನಾಹುತ ಸಂಭವಿಸಿದೆ. ಬಳಿಕವೂ ಬರೆಗಳು ಜರಿಯುತ್ತಿದ್ದು, ತಳ ಭಾಗದಲ್ಲಿ ಸರೋವರದಂತೆ ನೀರು ಹರಿಯುತ್ತಿರುವದನ್ನು ವೀಕ್ಷಿಸಿದಾಗ “ಇದು ನಮ್ಮ ಕೃಷಿ, ಬೆಳೆ ಭೂಮಿಯೇ?, ಕೊಡಗಿನ ನೆಲವೇ, ನಾವು ಎಲ್ಲ್ಲಿದ್ದೇವೆ ಎನ್ನುವಂತಹ ಸಂಶಯ ಮೂಡುತ್ತದೆ ಎಂದು ಕಾರ್ಯಪ್ಪ ತಮ್ಮ ಅನುಭವವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
ಅನಾಹುತ ಸಂದರ್ಭ ಚೆಟ್ಟೀರ, ಕೊಕ್ಕಲೇರ ಕುಟುಂಬಸ್ಥರ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಅನೇಕರು ಊರು ಬಿಟ್ಟು ತಮ್ಮ ಸಂಬಂಧಿಗಳ ಮನೆಯಲ್ಲಿದ್ದಾರೆ ಎಂದು ಅವರು ವಿವರಿಸಿದರು. ಏನಿದ್ದರೂ ಕೊಡಗಿಗೆ ಬಂದೆರಗಿದ ಈ ದುರಂತದ ಬಗ್ಗೆ ಸೂಕ್ತ ಪರಿಶೀಲನೆ, ವೈಜ್ಞಾನಿಕ ಪರಿಶೋಧನೆÉ ಅತ್ಯಗತ್ಯವಾಗಿದೆ. ಭವಿಷ್ಯತ್ತಿನಲ್ಲಿ ಇಂತಹ ದುರಂತ ವಾಗದಂತೆ ತಡೆಯಲು ಯೋಜನೆ ರೂಪಿಸಬೇಕಿದೆ ಎಂದು ಕಾರ್ಯಪ್ಪ ಸಲಹೆಯಿತ್ತಿದ್ದಾರೆ.