ಶನಿವಾರಸಂತೆ, ಆ. 31: ಪಟ್ಟಣದ ಚೆಸ್ಕಾಂ ನೌಕರರ ವತಿಯಿಂದ ಬೆಂಗಳೂರಿನ ಶ್ರೀನಿವಾಸ್ ಮತ್ತು ಅರವಿಂದ್ ಸಹಕಾರದೊಂದಿಗೆ ಕೊಡಗಿನ ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಯಿತು.
ಅತಿಯಾದ ಮಳೆ ಹಾಗೂ ಭೂಕುಸಿತದ ಪರಿಣಾಮ ನಿರಾಶ್ರಿತರಾಗಿರುವ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ತಮ್ಮ ಇಲಾಖೆ ಸಿಬ್ಬಂದಿ ನಿತ್ಯ ಬಳಕೆಯ ಸಾಮಗ್ರಿಗಳನ್ನು ಸ್ವ ಇಚ್ಛೆಯಿಂದ ಖರೀದಿಸಿ ಕಳುಹಿಸುತ್ತಿದ್ದಾರೆ ಎಂದು ಶಾಖಾಧಿಕಾರಿ ಹೇಮಂತ್ ಕುಮಾರ್ ಹೇಳಿದ್ದಾರೆ.