ಮಡಿಕೇರಿ, ಆ. 27: ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಉಂಟಾದ ಹಾನಿಯ ಸಂದರ್ಭದಲ್ಲಿ ಸಂತ್ರಸ್ತರ ನೆರೆವಿಗೆ ಧಾವಿಸಿದ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಧನ್ಯವಾದ ಸಲ್ಲಿಸುತ್ತದೆ. ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳು ಸ್ವೀಕೃತವಾಗಿರುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯವಿರುವ ರೈನ್ ಕೋಟ್, ಟಾರ್ಪಲಿನ್, ಕೊಡೆಗಳು, ದಿನಬಳಕೆಗೆ ಬಳಸುವ ಒಳ ಉಡುಪು, ಬೆಚ್ಚಗಿನ ಉಡುಪುಗಳು, ಪ್ಲಾಸ್ಟಿಕ್ ಮ್ಯಾಟ್, ಕುರ್ಚಿ, ಬಕೆಟ್, ಮಗ್ಗುಗಳು, ಟಾರ್ಚ್ ಲೈಟ್, ಸೋಲಾರ್ ದೀಪಗಳು, ಅಡುಗೆ ಪಾತ್ರೆಗಳು, ಬೆಡ್‍ಶೀಟ್, ಜಮಕಾನ್, ಕಂಬಳಿ, ತಲೆ ದಿಂಬುಗಳು, ಗ್ಯಾಸ್ ಸ್ಟೌವ್ ಮತ್ತು ಗೀಸರ್‍ಗಳು, ಬ್ಲೀಚಿಂಗ್ ಪೌಡರ್, ಫಿನಾಯಿಲ್ ಮತ್ತು ಸ್ವಚ್ಛತೆಗೆ ಸಂಬಂಧಪಟ್ಟ ವಸ್ತುಗಳನ್ನು ಮಾತ್ರ ನೇರವಾಗಿ ಜಿಲ್ಲಾಧಿಕಾರಿಯವರ ಕಚೇರಿ, ಜಿಲ್ಲಾಡಳಿತ ಭವನ ಇಲ್ಲಿಗೆ ಕಳುಹಿಸಿ ಕೊಡಲು ಜಿಲ್ಲಾಡಳಿತ ಮನವಿ ಮಾಡಿದೆ.

ಸಂತ್ರಸ್ತರಿಗೆ ಹಣದ ರೂಪದಲ್ಲಿ ದೇಣಿಗೆ ನೀಡುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ-2018 ಖಾತೆ ಸಂಖ್ಯೆ: 37887098605, ಭಾರತೀಯ ಸ್ಟೇಟ್ ಬ್ಯಾಂಕ್, ಐ.ಎಫ್.ಎಸ್.ಸಿ ಕೋಡ್: ಎಸ್‍ಬಿಐಎನ್ 0040277, ಎಂಐಸಿಆರ್ ಸಂಖ್ಯೆ:560002419, ವಿಧಾನಸೌಧ ಬೆಂಗಳೂರು ಶಾಖೆಯಲ್ಲಿರುವ ಪರಿಹಾರ ನಿಧಿ ಖಾತೆಗೆ ಜಮೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಕೋರಿದ್ದಾರೆ.