ಸೋಮವಾರಪೇಟೆ,ಆ.27: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಸಹೋದರತೆಯ ಸಂಕೇತವಾಗಿರುವ ರಕ್ಷಾಬಂಧನವನ್ನು ಆಚರಿಸಲಾಯಿತು.
ಹಾಸನ ಜಿಲ್ಲೆಯ ಬ್ರಹ್ಮಕುಮಾರಿ ವಿದ್ಯಾಲಯದ ಸಂಚಾಲಕಿ ಮೀನಾ ಅವರು ಸರ್ವರಿಗೂ ರಕ್ಷೆ ಕಟ್ಟಿ ರಕ್ಷಾಬಂಧನದ ಸಂದೇಶ ನೀಡಿದರು. ಈ ಸಂದರ್ಭ ಸೋಮವಾರಪೇಟೆ ಕೇಂದ್ರದ ಸಂಚಾಲಕಿ ದಾಕ್ಷಾಯಿಣಿ, ಪ್ರಮುಖರಾದ ಎಂ.ಸಿ. ಮುದ್ದಪ್ಪ, ಕುಶಾಲಪ್ಪ, ಶಾಲಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.