ಸುಂಟಿಕೊಪ್ಪ, ಆ.26: ಜಲ ಪ್ರಳಯದಿಂದ ನೆರೆ ಸಂತ್ರಸ್ತ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯನ್ನು ನೇರವೇರಿಸಲಾಯಿತು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಿತ್ಯಾನಂದ ವಿವೇಕ ವಂಶಿ ವಿವೇಕ ಶಿಕ್ಷಣ ವಾಹಿನಿಯ ಮಂಡ್ಯದ ಪ್ರಮೋದ್ ಭಾರ್ಗವ ಅವರ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಹಬ್ಬದ ಭಾವಚಿತ್ರವನ್ನು ಇರಿಸಿ ಹೂಗಳಿಂದ ಅಲಂಕೃತಗೊಳಿಸಿ ವಿಶೇಷ ಭಜನೆ, ಕಥೆಗಳನ್ನು ಹೇಳುವ ಮೂಲಕ ಹಬ್ಬದ ಮಹತ್ವತೆಯನ್ನು ಸಂತ್ರಸ್ತರಿಗೆ ಮನವರಿಕೆ ಮಾಡಿದರಲ್ಲದೆ ವಿಶೇಷ ಪೂಜೆಯನ್ನು ಸಂತ್ರಸ್ತರೊಂದಿಗೆ ಸೇರಿ ನೇರವೇರಿಸಿದರು.

ನೂರಾರು ಸಂಖ್ಯೆಯಲ್ಲಿರುವ ಸಂತ್ರಸ್ತ ಬಾಂಧವರು ಹಬ್ಬದಲ್ಲಿ ಪಾಲ್ಗೊಂಡು ದೇವರ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.